ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಮತ್ತು ಕೆಲ ಮಹಿಳೆಯರು ದೇಗುಲ ಪ್ರವೇಶಿಸಿದ ಕಾರಣಕ್ಕೆ ರಾಜ್ಯದಲ್ಲಿ ಸರಣಿ ಹರತಾಳ ನಡೆಯುತ್ತಿದ್ದು, ಇದರಿಂದಾಗಿ 2018ರಲ್ಲಿ 97 ಕೆಲಸದ ದಿನಗಳು ನಷ್ಟವಾಗಿವೆ. ಹರತಾಳದಿಂದ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಹೀಗಾಗಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿತ್ತು.