ಸಾಮಾನ್ಯ ವರ್ಗದ ಬಡವರಿಗೆ ಶೇ.10 ಮೀಸಲು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ!

ಸಾಮಾನ್ಯ ವರ್ಗದ ಬಡವರಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲಿಕೆಯಾಗಿದೆ..
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲಿಕೆಯಾಗಿದೆ..
ಸುಪ್ರೀಂ ಕೋರ್ಟ್ ಈ ಹಿಂದೆ ನಿಡಿದ್ದ ಆದೇಶದ ಅನುಸಾರ ಶೇ. 50ಕ್ಕಿಂತ ಹೆಚು ಪ್ರಮಾಣದಲ್ಲಿ ಮೀಸಲಾತಿ ನೀಡುವಂತಿಲ್ಲ. ಆದರೆ ಈ ಮಸೂದೆ ಜಾರಿಯಾದರೆ ಇದರ ಉಲ್ಲಂಘನೆಯಾಗಲಿದೆ ಎಂದು ಯೂತ್ ಆಫ್ ಇಕ್ವಾಲಿಟಿ ಗುಂಪಿನ ಯುವಕರು ಹಾಗೂ ಡಾ. ಕೌಶಲ್ ಕಾಂತ್ ಮಿಶ್ರಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಷಯವೆಂದರೆ ಭಾರತ ಸಂಸತ್ತು ಇದಾಗಲೇ ಮಸೂದೆಯನ್ನು ಅಂಗೀಕರಿಸಿದ್ದು ಸದ್ಯ ಮಸೂದೆ ರಾಷ್ಟ್ರಪತಿ ಅಂಗಣಕ್ಕೆ ಬಂದಿದೆ. ಒಮ್ಮೆ ರಾಷ್ಟ್ರಪತಿ ಅಂಕಿತ ಬಿದ್ದ ನಂತರ ಈ ಮಸೂದೆ ಕಾನೂನಾಗಿ ಪರಿವರ್ತನೆಗೊಳ್ಳುತ್ತದೆ.
ಶಿಕ್ಷಣ, ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗ ಸೇರಿ ಅನೇಕ ವಿಭಾಗಗಳಲ್ಲಿ ಸಾಮಾಯ ವರ್ಗದ ಬಡವರಿಗೆ ಶೇ.10 ಮೀಸಲು ನೀಡುವ ಮಸೂದೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com