ಸಿಬಿಐ ವಿವಾದ: ಅಲೋಕ್ ವರ್ಮಾರಿಂದ ವರ್ಗಾವಣೆ,ಅಸ್ತಾನ ಸಹಚರರಿಂದ ಹೈಕೋರ್ಟ್ ನಲ್ಲಿ ಅರ್ಜಿ

ವಿವಿಧ ಅಧಿಕಾರಿಗಳ ವರ್ಗಾವಣೆ ಆದೇಶ ಹಿಂಪಡೆಯುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿರ್ಧಾರದ ವಿರುದ್ಧ ಸಿಬಿಐ ಉಪ ಎಸ್ಪಿ ದೇವೇಂದ್ರ ಕುಮಾರ್ ಇಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅಲೋಕ್ ವರ್ಮಾ
ಅಲೋಕ್ ವರ್ಮಾ

ನವದೆಹಲಿ: ವಿವಿಧ ಅಧಿಕಾರಿಗಳ ವರ್ಗಾವಣೆ ಆದೇಶ  ಹಿಂಪಡೆಯುವ ಸಿಬಿಐ  ನಿರ್ದೇಶಕ ಅಲೋಕ್ ವರ್ಮಾ ಅವರ ನಿರ್ಧಾರದ ವಿರುದ್ಧ ಸಿಬಿಐ ಉಪ ಎಸ್ಪಿ ದೇವೇಂದ್ರ ಕುಮಾರ್ ಇಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 ಹೈಕೋರ್ಟ್ ನ್ಯಾಯಾಧೀಶ ನಾಜ್ಮಿ ವಾಜಿರಿ ಮುಂದೆ ನಾಳೆ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ, ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್  ವಿರುದ್ಧದ ಲಂಚ ಪ್ರಕರಣದಲ್ಲಿ ಎಫ್ ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಈ ನ್ಯಾಯಾಧೀಶರೇ ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.
ಕೇಂದ್ರ ಸರ್ಕಾರ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ನಂತರ  ಅಲೋಕ್  ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರಾಗಿ ಮುಂದುವರೆಯುವಂತೆ ಸುಪ್ರೀಂಕೋರ್ಟ್  ಕಳೆದ ಮಂಗಳವಾರ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ  77 ದಿನಗಳ ನಂತರ ಅಲೋಕ್ ವರ್ಮಾ ವರ್ಮಾ ನಿನ್ನೆಯಿಂದ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com