ಆನ್ ಲೈನ್ ನಲ್ಲಿ 'ನಮೋ ಬ್ರಾಂಡ್' ಉತ್ಪನ್ನಗಳು; ಬಿಜೆಪಿ ನಾಯಕರಿಂದ ಪ್ರಚಾರ

ಬಿಜೆಪಿಯ ನಾಯಕರು ಮತ್ತು ಯುವ ಸಚಿವರುಗಳು 'ನಮೋ ಮತ್ತೊಮ್ಮೆ' ಎಂಬ ಬರಹದ ಕಪ್ಪು ಬಣ್ಣದ ...
ನಮೋ ಆಗೈನ್ ಶರ್ಟ್ ಧರಿಸಿದ ಬಿಜೆಪಿ ನಾಯಕರು
ನಮೋ ಆಗೈನ್ ಶರ್ಟ್ ಧರಿಸಿದ ಬಿಜೆಪಿ ನಾಯಕರು

ನವದೆಹಲಿ: ಬಿಜೆಪಿಯ ನಾಯಕರು ಮತ್ತು ಯುವ ಸಚಿವರುಗಳು 'ನಮೋ ಮತ್ತೊಮ್ಮೆ' ಎಂಬ ಬರಹದ ಕಪ್ಪು ಬಣ್ಣದ ಟಿ-ಶರ್ಟ್ ನ್ನು ಧರಿಸಿ ಕ್ಯಾಮರಾಗೆ ಫೋಸ್ ನೀಡಿದರು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದರು, ಅದೀಗ ವೈರಲ್ ಆಗಿದ್ದು ಸ್ವತಃ ಪಿಎಂ ಮೋದಿ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಸೋಮವಾರ ಅಂದರೆ ಜನವರಿ 8ರಂದು ಲೋಕಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ಅನುರಾಗ್ ಠಾಕೂರ್ ಹೂಡಿ ಟೀಶರ್ಟ್ ನ್ನು ಧರಿಸಿ ಫೋಟೋ ತೆಗೆದು ಅದನ್ನು ತಮ್ಮ ಸೈಟ್ ನಲ್ಲಿ ಅಪ್ ಲೋಡ್ ಮಾಡಿ ತಮ್ಮ ಸಹೋದ್ಯೋಗಿ ಸಚಿವ ಕಿರಣ್ ರಿಜಿಜು ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಸಹ ಹೂಡೀಸ್ ಟೀ ಶರ್ಟ್ ಧರಿಸಿ ತೆಗೆದ ಫೋಟೋವನ್ನು ಕಳುಹಿಸುವಂತೆ ಶಿಫಾರಸು ಮಾಡಿದ್ದರು.

ಅದರಂತೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಕಿರಣ್ ರಿಜಿಜು, ರಾಜ್ಯವರ್ಧನ್ ಸಿಂಗ್ ರಾಥೋಡ್, ಬಬುಲ್ ಸುಪ್ರಿಯೊ ಮತ್ತು ಅನುರಾಗ್ ಠಾಕೂರ್ ಒಟ್ಟಿಗೆ ಗ್ರೂಪ್ ಫೋಟೋಗೆ ಫೋಸ್ ಕೊಟ್ಟು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಿದ್ದಾರೆ.

ನರೇಂದ್ರ ಮೋದಿಯವರು ಮತ್ತೊಮ್ಮೆ ನಾಯಕರಾಗಿ ಆಯ್ಕೆಯಾಗಬೇಕು. ಇಲ್ಲಿ ಭಾರತ ಮತ್ತು ನಾಯಕತ್ವ ಮುಖ್ಯವಾಗುತ್ತದೆ. ನಿಮಗೆ ಏನು ಸರಿ ಅನಿಸುತ್ತದೆ ಅದರ ಪರವಾಗಿ ಧ್ವನಿಯೆತ್ತಿ. ನಮೋ ಪರವಾಗಿ ಪ್ರಚಾರ ಮಾಡಿ,  ನಮೋ ಬ್ರಾಂಡ್ ನ ಉತ್ಪನ್ನಗಳು, ಯೋಜನೆಗಳು ಮತ್ತು ಪರಿಕಲ್ಪನೆಗಳನ್ನು ಮಾರುಕಟ್ಟೆಯಲ್ಲಿ ಇಂದಿನಿಂದ ಹೆಚ್ಚೆಚ್ಚು ಪ್ರಚಾರ ಮಾಡಿ, ಬಳಸಿ ಎಂದು ರಾಜ್ಯವರ್ಧನ್ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರ ಈ ಫೋಟೋ, ಟ್ವೀಟ್ ವೈರಲ್ ಆಗಿದೆ. ನಮೋ ಮರ್ಚೆಂಡೈಸ್ ಎಂಬ ಟ್ವಿಟ್ಟರ್ ಖಾತೆ ಕೂಡ ಇದೆ. ಮಾರುಕಟ್ಟೆಯಲ್ಲಿ ಬ್ರಾಂಡ್ ಮೋದಿತ್ವ ಜನಪ್ರಿಯವಾಗುತ್ತಿದೆ. ಪ್ರಧಾನಿ ಮೋದಿಯವರು ಸೋಷಿಯಲ್ ಮೀಡಿಯಾಗೆ ಬಂದ ಮೇಲೆ ಅದು ಹೆಚ್ಚು ಜನಪ್ರಿಯವಾಯಿತು. ಟ್ವೀಟ್, ಫೇಸ್ ಬುಕ್ ಮೂಲಕ ಹೆಚ್ಚೆಚ್ಚು ಜನಪ್ರಿಯವಾಗುತ್ತಾ ಸೋಷಿಯಲ್ ಮೀಡಿಯಾ ಬಳಕೆಯನ್ನು ಮೋದಿಯವರು ಹೆಚ್ಚು ಮಾಡಿದರು ಎಂದರೆ ತಪ್ಪಾಗಲಾರದು. 2014ರ ಚುನಾವಣೆಯ ಸೋಲಿನ ನಂತರವೇ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದು. ಇದೀಗ 2019ರ ಚುನಾವಣೆಯ ಹೊತ್ತಿಗೆ ಬ್ರಾಂಡ್ ನಮೋವನ್ನು ಬಿಜೆಪಿ ಮತ್ತಷ್ಟು ಜನಪ್ರಿಯ ಮಾಡುತ್ತಿದೆ. ಪ್ರಧಾನಿಯವರ ಬ್ರಾಂಡ್ ಗಳನ್ನು ನಮೋ ಮೊಬೈಲ್ ಆಪ್ ಮೂಲಕ ಮಾರಾಟ ಮಾಡಲಾಗುತ್ತಿದೆ.

ಟಿ ಶರ್ಟ್ ಗಳಲ್ಲಿ ಮೋದಿ ಮತ್ತೊಮ್ಮೆ(ನವೋ ಅಗೈನ್), ಭಾರತ ಪರಿವರ್ತನೆ(ಇಂಡಿಯಾ ಮಾಡಿಫೈಡ್), ಮೇಕ್ ಇನ್ ಇಂಡಿಯಾ, ಯುವ ಶಕ್ತಿ-ನವ ಭಾರತ ಎಂಬ ಘೋಷವಾಕ್ಯಗಳಿರುವ ನೋಟ್ ಪುಸ್ತಕಗಳು, ಸ್ಟಿಕರ್, ಮ್ಯಾಗ್ನೆಟ್, ಮಗ್, ಕ್ಯಾಪ್, ಪೆನ್ನು ಇತ್ಯಾದಿ ಉತ್ಪನ್ನಗಳಿವೆ. ಇದರ ಮಾರಾಟದಿಂದ ಬರುವ ಹಣವನ್ನು ಗಂಗಾ ನದಿ ಸ್ವಚ್ಛತೆಗೆ ಬಳಸಲು ಬಿಜೆಪಿ ನಿರ್ಧರಿಸಿದೆ.

ನಮೋ ಆಪ್ ನ್ನು 50 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದು ಎಲ್ಲಾ ಆಂಡ್ರಾಯ್ಡ್ ಮತ್ತು ಐಫೋನ್ ಗಳಲ್ಲಿ ಲಭ್ಯವಾಗುತ್ತದೆ. ಕಳೆದ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿಯವರ 68ನೇ ಹುಟ್ಟುಹಬ್ಬಕ್ಕೆ ನಮೋ ಉತ್ಪನ್ನಗಳ ಮಾರಾಟ ಆರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com