ಹಸುಗಳ ಹೆಸರಿನಲ್ಲಿ ಮತ ಕೇಳುವವರು ಅವುಗಳಿಗೆ ಮೇವನ್ನು ನೀಡಬೇಕು: ಅರವಿಂದ್ ಕೇಜ್ರಿವಾಲ್

ಗೋವುಗಳ ಹೆಸರಿನಲ್ಲಿ ಮತ ಕೇಳುವವರು ಅವುಗಳಿಗೆ ಮೇವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ....
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on
ನವದೆಹಲಿ: ಗೋವುಗಳ ಹೆಸರಿನಲ್ಲಿ ಮತ ಕೇಳುವವರು ಅವುಗಳಿಗೆ  ಮೇವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬವಣಾಗೆ ಭೇಟಿ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅಲ್ಲಿನ ಗೋಶಾಲೆಗೆ ಭೇಟಿ ನೀಡಿದ್ದರು, ಕಳೆದ 2 ವರ್ಷಗಳಿಂದ ಗೋಶಾಲೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಸಚಿವ ಗೋಪಾಲ್ ರೈ ಜೊತೆ ಶ್ರೀ ಕೃಷ್ಣ ಗೋಶಾಲೆ ಗೆ  ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು,  ದೆಹಲಿ ಸರ್ಕಾರ ಮತ್ತು ಮುನಿಸಿಪಲ್ ಕಾರ್ಪೋರೇಷನ್ ನೀಡುತ್ತಿರುವ ಅನುದಾನದಲ್ಲಿ ಈ ಗೋಶಾಲೆ ನಡೆಸಲಾಗುತ್ತಿದೆ, ಈ ವೇಳೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಎಂದಿಗೂ ಹಸುಗಳ ಹೆಸರಿನಲ್ಲಿ ಮತ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ದೆಹಲಿಯ ಮುನಿಸಿಪಲ್ ಕಾರ್ಪೋರೇಷನ್ ನಲ್ಲಿ ಕಳೆದ 2 ವರ್ಷಗಳಿಂದ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದ್ದಾರೆ.
ಮುಂದಿನ ವಾರ ಹರ್ಯಾಣದ ಗೋಶಾಲೆಗಳಿಗೆ ಭೇಟಿ ನೀಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com