ಲಡಾಖ್: ಸ್ವದೇಶೀ ನಿರ್ಮಾಣದ ಜಗತ್ತಿನ ಅತಿ ದೊಡ್ಡ ಸೌರವಿದ್ಯುತ್ ಘಟಕ ಶೀಘ್ರ

ಕಾಶ್ಮೀರ ನಿಸರ್ಗದ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಇಂತಹಾ ಕಾಶ್ಮೀರಕ್ಕೆ ಇದೀಗ ಇನ್ನೊಂದು ಹೆಮ್ಮೆಯ ಗರಿ....
ಲಡಾಖ್: ಸ್ವದೇಶೀ ನಿರ್ಮಾಣದ  ಜಗತ್ತಿನ ಅತಿ ದೊಡ್ಡ ಸೌರವಿದ್ಯುತ್ ಘಟಕ ಶೀಘ್ರ
ಲಡಾಖ್: ಸ್ವದೇಶೀ ನಿರ್ಮಾಣದ ಜಗತ್ತಿನ ಅತಿ ದೊಡ್ಡ ಸೌರವಿದ್ಯುತ್ ಘಟಕ ಶೀಘ್ರ
ನವದೆಹಲಿ: ಕಾಶ್ಮೀರ ನಿಸರ್ಗದ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಇಂತಹಾ ಕಾಶ್ಮೀರಕ್ಕೆ ಇದೀಗ ಇನ್ನೊಂದು ಹೆಮ್ಮೆಯ ಗರಿ ಮೂಡಿದೆ. ಇಲ್ಲಿನ ಲಡಾಖ್ ನಲ್ಲಿ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಕಾರ್ಯಾಚರಣೆಗೆ ಸಿದ್ದವಾಗುತ್ತಿದೆ.
ಲಡಾಖ್ ನೈಸರ್ಗಿಕ ಸೌಂದರ್ಯ ಪರಿಸರ ನಾಶದಿಂದ ಕುಂದುತ್ತಿದ್ದು ಈ ಸೌರ ವಿದ್ಯುತ್ ಘಟಕದಿಂದಾಗಿ ಪರಿಸರ ಕಾಳಜಿ ಜತೆಗೆ ಅಭಿವೃದ್ದಿ ಸಹ ಆಗಲಿದೆ. ಕಾರ್ಗಿಲ್ ದಕ್ಷಿಣಕ್ಕೆ ಸುಮಾರು 200 ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿರುವ ಈ ಸೌರ ವಿದ್ಯುತ್ ಘಟಕ  12,750 ಟನ್  ಕಾರ್ಬನ್ (ಇಂಗಾಲ)ನ ಮಾಲಿನ್ಯ ತಡೆಯಲಿದೆ.
ಈ ಘಟಕವು 5000 ಮೆಗಾವ್ಯಾಟ್ ಸೌರ ಶಕ್ತಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ನವೀಕರಿಸಭುದಾದ ಇಂಧನಗಳ ಸಚಿವಾಲಯ ಅಡಿಯಲ್ಲಿನ ಭಾರತೀಯ ಸೌರ ವಿದ್ಯುತ್ ನಿಗಮ ಈ ಯೋಜನೆಯನ್ನು ಜಾರಿ ಮಾಡಿದೆ.2023ಕ್ಕೆ ಯೋಜನೆ ಸಂಪೂರ್ಣವಾಗಲಿದ್ದು 45 ಸಾವಿರ ಕೋಟಿ ರು. ಮೊತ್ತದ ಯೋಜನೆ ಇದಾಗಿದೆ.
ಈ ಯೋಜನೆಯಿಂದಾಗಿ ಕಡಿದಾದ ಬೆಟ್ಟಪ್ರದೇಶ ಅಭಿವೃದ್ದಿಯಾಗುವುದಲ್ಲದೆ ಸ್ಥಳೀಯರಿಗೆ ಉದ್ಯೋಗಾವಕಾಶ ಸಹ ಒದಗಲಿದೆ ಎಂದು ಇಂಧನ ಸಚಿವ ಆರ್.ಕೆ, ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಚೀನಾದ  ಡಾಟೊಂಗ್ ಸೋಲಾರ್ ಪ್ಲಾಂಟ್ 3,000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವುದರೊಡನೆ ಜಾಗತಿಕವಾಗಿ ಅತಿ ದೊಡ್ಡ ಸೌರ ವಿದ್ಯುತ್ ಘಟಕ ಎನಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com