ಮೋದಿಗೆ ಖೆಡ್ಡಾ: ಬದ್ಧವೈರಿ ಎಸ್‌ಪಿ–ಬಿಎಸ್‌ಪಿ ಒಂದಾಗುವಂತೆ ಮಾಡಿದ ಮಾಸ್ಟರ್‌ಮೈಂಡ್‌ ಇವರೇ!

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಬದ್ಧವೈರಿ ಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಒಂದಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಸವಾಲಾಗಿದ್ದಾರೆ.
ನರೇಂದ್ರ ಮೋದಿ-ಸಂಜಯ್ ಸೇಠ್
ನರೇಂದ್ರ ಮೋದಿ-ಸಂಜಯ್ ಸೇಠ್
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಬದ್ಧವೈರಿ ಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಒಂದಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಸವಾಲಾಗಿದ್ದಾರೆ. 
ಹೌದು, ಉತ್ತರಪ್ರದೇಶದಲ್ಲಿ ಬದ್ಧವೈರಿ ಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ತಮ್ಮ 24 ವರ್ಷಗಳ ಹಳೆಯ ದ್ವೇಷವನ್ನು ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿದೆ. ಇನ್ನು ಈ ಎರಡು ಪಕ್ಷಗಳು ಒಂದಾಗುವಂತೆ ಮಾಡಿದ ಮಾಸ್ಟರ್‌ಮೈಂಡ್‌ ಇವರೇ, ಸಮಾಜವಾಧಿ ಪಕ್ಷದ ಸಂಸದ ಸಂಜಯ್ ಸೇಠ್. 
ಸಂಸದ ಸಂಜಯ್ ಸೇಠ್ ಹಾಗೂ ಬಿಎಸ್ಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಜೊತೆಗೂಡಿ ಎಸ್ಪಿ ಮತ್ತು ಬಿಎಸ್ಪಿ ಒಂದಾಗುವಂತೆ ಮಾಡಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಉಭಯ ಪಕ್ಷಗಳಲ್ಲಿ ತಲ್ಲಣ ಮೂಡಿತ್ತು. 
ಇದೇ ವೇಳೆ ಸತೀಶ್ ಸೇಠ್ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಹಾಗೂ ಬಿಎಸ್ಪಿ ಮುಖಂಡೆ ಮಾಯಾವತಿ ಜತೆ ನಿರಂತರ ಸಂಪರ್ಕದಲ್ಲಿದ್ದು ಭವಿಷ್ಯದಲ್ಲಿ ತಮ್ಮ ಪಕ್ಷಗಳ ಸ್ಥಿತಿಗತಿಯ ಬಗ್ಗೆ ಸುದೀರ್ಘ ಚರ್ಚೆಗಳು ನಡೆಸಿದ್ದರು. ಪರಿಣಾಮ ಇಂದು ಉಭಯ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ತಿರುಗಿಬೀಳಲು ಅಣಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com