26/11 ಮುಂಬೈ ದಾಳಿ ಸಂಚುಕೋರ ತಹಾವ್ವುರ್ ರಾಣ ಭಾರತದ ವಶಕ್ಕೆ?
ನವದೆಹಲಿ: 26/11 ಮುಂಬೈ ದಾಳಿಯ ಸಂಚಿಗೆ ಸಂಬಂಧಿಸಿದಂತೆ ಅಮೆರಿಕಾದಿಂದ 14 ವರ್ಷ ಜೈಲು ಶಿಕ್ಷೆಗೊಳಗಾಗಿರುವ ತಹಾವ್ವುರ್ ಹುಸೈನ್ ರಾಣ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನ- ಕೆನಡಾ ಪ್ರಜೆಯಾಗಿರುವ ರಾಣ ಜೈಲು ಶಿಕ್ಷೆ ಡಿಸೆಂಬರ್ 2021ರಲ್ಲಿ ಅಂತ್ಯಗೊಳ್ಳಲಿದೆ. ಅದಕ್ಕೂ ಮುಂಚಿತವಾಗಿ ಆತನನ್ನು ಭಾರತಕ್ಕೆ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಗತ್ಯ ಕಾಗದ ಪತ್ರಗಳ ಕಾರ್ಯ ಪೂರ್ಣಗೊಂಡಿದ್ದು, ಅಮೆರಿಕಾದ ಟ್ರಂಪ್ ಆಡಳಿತ ಭಾರತ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ.
ಮುಂಬೈ ದಾಳಿ ಆರೋಪದ ಹಿನ್ನೆಲೆಯಲ್ಲಿ 2009ರಲ್ಲಿ ತಹಾವ್ವುರ್ ರಾಣಾನನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್ ಇ -ತೊಯ್ಬಾ ಸಂಘಟನೆ ನಡೆಸಿದ ದಾಳಿಯಿಂದ ಅಮೆರಿಕಾದ ನಾಗರಿಕರು ಸೇರಿದಂತೆ ಸುಮಾರು 166 ಮಂದಿ ಮೃತಪಟ್ಟಿದ್ದರು. 9 ಮಂದಿ ಭಯೋತ್ಪಾದಕರನ್ನು ಪೊಲೀಸರು ಹತ್ಯೆಗೈದಿದ್ದರು. ಉಗ್ರ ಕಸಬ್ ನನ್ನು ನೇಣಿಗೇರಿಸಲಾಗಿದೆ.
2013ರಲ್ಲಿ ರಾಣಾನಿಗೆ 14 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿತ್ತು. ಆದಾಗ್ಯೂ, ಡಿಸೆಂಬರ್ 2021ರಲ್ಲಿ ಆತನನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂಬುದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ