ಒಡಿಶಾ: ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ! ಮುಖ್ಯ ಶಿಕ್ಷಕಿ ಅಮಾನತು

14 ವರ್ಷದ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಕಾರಣ ಶಾಲಾ ಮುಖ್ಯಶಿಕ್ಷಕಿಯನ್ನು ಅಮಾನತುಗೊಳಿಸಿದ....
ಒಡಿಶಾ: ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ! ಮುಖ್ಯ ಶಿಕ್ಷಕಿ ಅಮಾನತು
ಒಡಿಶಾ: ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ! ಮುಖ್ಯ ಶಿಕ್ಷಕಿ ಅಮಾನತು
ಭುವನೇಶ್ವರ್: 14 ವರ್ಷದ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಕಾರಣ ಶಾಲಾ ಮುಖ್ಯಶಿಕ್ಷಕಿಯನ್ನು ಅಮಾನತುಗೊಳಿಸಿದ್ದ ಘತನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಂಗಿಬಾದಿ ಎಂಬಲ್ಲಿ ನಡೆದಿದೆ.
ಕಂಧಮಾಲ್ ಜಿಲ್ಲೆ ದರಿಂಗಿಬಾದಿಯಲ್ಲಿರುವ ‘ಸೇವಾ ಆಶ್ರಯ ಹೈಸ್ಕೂಲ್’ ಹಾಸ್ಟೆಲ್‍ ನಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಹಾಸ್ಟೆಲ್ ನ ಸಿಬ್ಬಂದಿ ಬಾಲಕಿ ಹಾಗೂ ಮಗುವನ್ನು ಹಾಸ್ಟೆಲ್ ನಿಂದ ಸಮೀಪದಲ್ಲಿರುವ ಕಾಡಿಗೆ ತಳ್ಳಿದ್ದಾರೆ.
ಈ ಸಂಬಂಧ ಕ್ಷಿಪ್ರ ತನಿಖೆ ನಡೆಸಲು ಆದೇಶ್ಸಿರುವ ಜಿಲ್ಲಾಡಳಿತ ಸೋಮವಾರಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಾರಾಣಿ ಸೇರಿ ಸಂಸ್ಥೆಯ ಮೂರು ಸಹಾಯಕ ಸೂಪರಿಂಟೆಂಟ್ ಗಳನ್ನು ಅಮಾನತುಗೊಳಿಸಿದೆ.
ಘಟನೆ ಸಂಬಂಧ ಪೋಲೀಸರು ಇದುವರೆಗೆ ಆರು ಮಂದಿಯ ವಿಚಾರಣೆ ನಡೆಸಿದ್ದಾರೆ.
ಬಾಲಕಿ ಹಾಗೂ ನವಜಾತ ಶಿಶುವನ್ನು ಮೊದಲಿಗೆ ಕಂಧಮಾಲ್ ನಲ್ಲಿರುವ ಬಾಲಿಗುಡ ಸಬ್ ಡಿವಿಜನಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಭಾನುವಾರ ಅವರನ್ನು ಬೆರಾಂಪುರ್ ನಲ್ಲಿರುವ ಎಮ್ಕೆಸಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಲ್ಲಿ ನವಜಾತ ಶಿಶು ಮರಣಿಸಿದೆ ಎಂದು ಕಂಧಮಾಲ್ ಜಿಲ್ಲಾ ಕಲ್ಯಾಣ ಅಧಿಕಾರಿ ಚಾರುಲತಾ ಮಲಿಕ್ ವಿವರಿಸಿದರು.
ಸಧ್ಯ ಮಹಿಳಾ ಸ್ತ್ರೀರೋಗ ಚಿಕಿತ್ಸಾ ವಾರ್ಡ್ ನಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇದಕ್ಕೆ ಎಂಟು ತಿಂಗಳ ಹಿಂದೆ ಒಮ್ಮೆ ಬಾಲಕಿ ಮನೆಗೆ ತೆರಳುತ್ತಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಆದರೆ ಭಯದ ಕಾರಣದಿಂದಾಗಿ ಬಾಲಕಿ ಈ ಕುರಿತು ಏನನ್ನೂ ಬಾಯಿ ಬಿಟ್ಟಿರಲಿಲ್ಲ ಎನ್ನಲಾಗಿದೆ.
ಇದುವರೆಗೆ ಶಾಲಾ ಮುಖ್ಯಶಿಕ್ಷಕಿ, ಹಾಸ್ಟೆಲ್‍ನ ಇಬ್ಬರು ಅಡುಗೆ ಭಟ್ಟರು, ಮಹಿಳಾ ಮೇಲ್ವಿಚಾರಕಿ ಹಾಗೂ ಓರ್ವ ದಾದಿಯರನ್ನು ಜಿಲ್ಲಾಡಳಿತ ಅಮಾನತು ಮಾಡಿ ಆದೇಶಿಸಿದ್ದು ಪೋಲೀಸ್ ತನಿಖೆ ಚುರುಕುಗೊಂಡಿದೆ.
ಘಟನೆ ಸಂಬಂಧ ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸೇರಿ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ.ಸೋಮವಾರ, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯರು ಆಸ್ಪತ್ರೆಯಲ್ಲಿರುವ ಸಂತ್ರಸ್ಥ ಬಾಲಕಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com