ಪ್ರತಿಪಕ್ಷಗಳಿಗೆ ಮೋದಿ ಸರ್ಕಾರ ಟೀಕಿಸುವ ಕೊಂಕು ಬುದ್ಧಿ: ಅರುಣ್‌ ಜೇಟ್ಲಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ತೀರ್ಮಾನ, ನಿರ್ಧಾರವನ್ನು....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ತೀರ್ಮಾನ, ನಿರ್ಧಾರವನ್ನು ಟೀಕಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇದು ಪ್ರತಿಪಕ್ಷಗಳ ಕೊಂಕು ಬುದ್ಧಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ವೈದ್ಯಕೀಯ ತಪಾಸಣೆಗಾಗಿ ಅಮೆರಿಕದಲ್ಲಿರುವ ಅರುಣ್ ಜೇಟ್ಲಿ, ತಮ್ಮ ಫೇಸ್‌ಬುಕ್‌ ಮೂಲಕವೇ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಸರ್ಕಾರದ ಪ್ರತಿ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವವರು, ಪ್ರತಿ ನಿರ್ಧಾರವನ್ನು ಪ್ರಶ್ನಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಇಂಥವರ ಮುಖ್ಯ ಗುರಿ ಎಂದರೆ ಸರ್ಕಾರವನ್ನು ಟೀಕಿಸುವುದಷ್ಟೇ ಆಗಿದೆ. 
ಕೇಂದ್ರ ಸರ್ಕಾರ ಇತ್ತೀಚಿಗೆ ಐತಿಹಾಸಿಕ ವಿಧೇಯಕ ಜಾರಿಗೆ ತಂದಿತು. ಅದುವೇ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲು ಕಲ್ಪಿಸುವ ನಿರ್ಧಾರ. ಆದರೆ ಇದನ್ನು ಮಂಡಿಸಿದ ಕೂಡಲೇ ವಿರೋಧಿ ಬಣ, ಮೋದಿ ಸರ್ಕಾರ ಇಡೀ ಭಾರತವನ್ನೇ ವಿಭಜನೆ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಇನ್ನು ರಫೇಲ್‌ ಡೀಲ್‌ ಕುರಿತು ಸುಳ್ಳುಗಳನ್ನೇ ಸತ್ಯ ಮಾಡಲು ಹೊರಟಿತು ಈ ವಿರೋಧಿ ಗುಂಪು. ಸುಪ್ರೀಂ ಕೋರ್ಟ್‌ ಕೂಡ ಈ ಡೀಲ್ ನಲ್ಲಿ ಪಾರದರ್ಶಕತೆ ಇದೆ ಎಂದು ಸ್ಪಷ್ಟಪಡಿಸಿದೆ. ಆದರೂ ಈ ಗುಂಪಿಗೆ ಸುಳ್ಳು ಹೇಳುವುದು ಚಾಳಿಯಾಗಿದೆ. ಈ ವಿಷಯದಲ್ಲಿ ವಿರೋಧಿಗಳು ಹೇಳಿರುವುದು ಎಲ್ಲವೂ ಕಲ್ಪಿತವಾದವೇ. ಆದರೆ ಮೋದಿ ನೇತೃತ್ವದ ನಮ್ಮ ಸರ್ಕಾರ ಕೋಟ್ಯಂತರ ರು. ಹಣವನ್ನು ಉಳಿಸಿದೆ ಎಂದು ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com