ಲಡಾಖ್ ನಲ್ಲಿ ಭಾರೀ ಹಿಮಪಾತ: 10 ಮಂದಿ ನಾಪತ್ತೆ

ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇಂದು ಹಠಾತ್ ಹಿಮಪಾತಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ರಕ್ಷಣಾ ಸಿಬ್ಬಂದಿ
ರಕ್ಷಣಾ ಸಿಬ್ಬಂದಿ

ಶ್ರೀನಗರ: ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇಂದು  ಹಠಾತ್ ಹಿಮಪಾತಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಖಾರ್ ದುಂಗ್ ಲಾ ಮೂಲಕ ಟ್ರಕ್ ನಲ್ಲಿ ತೆರಳುತ್ತಿದ್ದವರು ನಾಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರ  ವಿಪತ್ತು ನಿರ್ವಹಣಾ ಪಡೆ ಹಾಗೂ  ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಬಗ್ಗೆ ಗುರುವಾರವೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿತ್ತು.

ಜಮ್ಮು- ಕಾಶ್ಮೀರದ ಅನಂತ್ ನಾಗ್, ಬುದ್ ಗಂ, ಬಾರಮುಲ್ಲಾ, ಬಂಡಿಪೊರಾ, ಗಂಡೆರ್ ಬಲ್,  ಕಾರ್ಗಿಲ್, ಕುಲ್ಗಾಂ, ಕುಪ್ವಾರ ಮತ್ತು ಲೇಹ್ ಜಿಲ್ಲೆಯಲ್ಲಿ ಭಾರೀ ಹಿಮಾಪಾತವಾಗಲಿದೆ ಎಂದು ಹವಾಮಾನ ಇಲಾಖೆಯ ನಿನ್ನೆ ಮುನ್ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com