ಹಿಂದೂ ಮಹಿಳೆ, ಮುಸ್ಲಿಂ ಪುರುಷ ದಂಪತಿಗೆ ಜನಿಸಿದ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಬಹುದು- ಸುಪ್ರೀಂ

ಹಿಂದೂ ಮಹಿಳೆ ವಿವಾಹವಾಗಿದ್ದ ಮುಸ್ಲಿಂ ಪುರುಷನಿಗೆ ಹುಟ್ಟಿದ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಹಿಂದೂ ಮಹಿಳೆ ವಿವಾಹವಾಗಿದ್ದ ಮುಸ್ಲಿಂ ಪುರುಷನಿಗೆ ಹುಟ್ಟಿದ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂದು ಸುಪ್ರೀಂಕೋರ್ಟ್  ಹೇಳಿದೆ.

ನ್ಯಾಯಾಧೀಶರಾದ ಎನ್. ವಿ. ರಾಮಣ್ಣ ಮತ್ತು ಮೋಹನ್ ಎಂ, ಶಾಂತನಗೌಡರ್ ಅವರನ್ನೊಳಗೊಂಡ  ದ್ವಿ ಸದಸ್ಯ ಪೀಠ ಕೇರಳ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಮುಸ್ಲಿಂ ಪುರುಷ ಹಾಗೂ ಹಿಂದೂ ಧರ್ಮಕ್ಕೆ ಸೇರಿದ ಆತನ ಎರಡನೇ ಹೆಂಡತಿಯ ಹುಟ್ಟಿದ್ದ ವ್ಯಕ್ತಿಯೋರ್ವರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದೂಗಳು ಹೂವು ಮತ್ತಿತರಗಳಿಂದ ಆಲಂಕರಿಸಿದ ಪ್ರತಿಮೆಯನ್ನು ಪೂಜಿಸುತ್ತಾರೆ. ಮುಸ್ಲಿಂ ಪುರುಷನೊಂದಿಗೆ ಹಿಂದೂ ಮಹಿಳೆ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಹೇಳಿಕೆ ನೀಡಿತು.

ಮಾನ್ಯತೆ ವಿವಾಹ, ಮಾನ್ಯತೆ ಇಲ್ಲದ ವಿವಾಹದ ಬಗ್ಗೆ ಮುಸ್ಲಿಂ ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಹಿಂದೂ ಮಹಿಳೆಯೊಂದಿಗೆ ವಿವಾಹವಾಗಿದ್ದ ಮುಸ್ಲಿಂ ಪುರುಷನಿಗೆ ಹುಟ್ಟಿದ ಮಕ್ಕಳು ಕಾನೂನುಬದ್ಧರಾಗಿದ್ದು, ತಂದೆಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com