ಕೇರಳದ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ ವಿರುದ್ಧ ಪೊಪ್ ಫ್ರಾನ್ಸಿಸ್ ಗೆ ಸ್ವಾಮಿ ಅಗ್ನಿವೇಶ್ ಪತ್ರ

ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಪೊಪ್ ಫ್ರಾನ್ಸಿಸ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಗ್ನಿವೇಶ್ ಪತ್ರ ಬರೆದಿದ್ದಾರೆ.
ಸ್ವಾಮಿ ಅಗ್ನಿವೇಶ್
ಸ್ವಾಮಿ ಅಗ್ನಿವೇಶ್

ತಿರುವನಂತಪುರಂ: ಅತ್ಯಾಚಾರ ಆರೋಪಿ ಬಿಸಪ್ ಫ್ರಾಂಕೊ ಮುಲಾಕ್ಕಲ್  ಬಂಧನಕ್ಕೆ ಬಂಧನಕ್ಕೆ ಆಗ್ರಹಿಸಿ ಕೊಚ್ಚಿಯಲ್ಲಿ ಪ್ರತಿಭಟನೆ ಮಾಡಿದ್ದ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು  ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಪೊಪ್ ಫ್ರಾನ್ಸಿಸ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಗ್ನಿವೇಶ್ ಪತ್ರ ಬರೆದಿದ್ದಾರೆ.

ಬಿಸಪ್ ಫ್ರಾಂಕೊ ಮುಲಾಕ್ಕಲ್  ವಿರುದ್ಧ  ಪ್ರತಿಭಟನೆ ನಡೆಸಿದ  ಕೇರಳದಲ್ಲಿನ ಮಿಷಿನರಿಗಳಲ್ಲಿನ ಕೆಲ  ಕ್ರೈಸ್ತ ಸನ್ಯಾಸಿನಿಯರ ಮೇಲಿನ  ದೌರ್ಜನ್ಯದ ಬಗ್ಗೆ ಪೋಪ್ ಗೆ ಬರೆದಿರುವ ಪತ್ರದಲ್ಲಿ ಸ್ವಾಮಿ ಅಗ್ನಿವೇಶ್ ವಿವರಿಸಿದ್ದಾರೆ.

ಸನ್ಯಾಸಿನಿಯರಾದ   ಅಲ್ಪಿ ಪಾಲಸೆರಿಲ್,  ಅನುಪಮ ಕೆಲಾಮಂಗಲಾತುವೆಲಿಯಿಲ್ , ಜೊಸೆಪೈನ್,  ಮತ್ತು ಅಂಸಿಟಾ ಉರುಂಬಿಲ್ ಅವರನ್ನು ವರ್ಗಾವಣೆ ಮಾಡಿರುವ ಆದೇಶದ ಪತ್ರವನ್ನು ಇಂದು   ಸುದ್ದಿಸಂಸ್ಥೆಯೊಂದಕ್ಕೆ ಬಿಡುಗಡೆ ಮಾಡಲಾಗಿದ್ದು, ಇದು ಅನ್ಯಾಯಯುತವಾದದ್ದು ಎಂದು ಅವರು ಹೇಳಿದ್ದಾರೆ.

ನ್ಯಾಯಕ್ಕಾಗಿ ಧ್ವನಿ ಎತ್ತಿದ  ಸನ್ಯಾಸಿನಿಯರಿಗೆ ಭಾರತದ ಜನತೆ ಗೌರವ ಇದೆ.  ಅವರ ಸೇವೆಯನ್ನು ಜೀಸಸ್ ಒಪುತ್ತೇನೆ ಎಂಬುದನ್ನು ನಂಬುತ್ತೇನೆ . ಆದರೆ, ಅತ್ಯಾಚಾರಿಗಳ ವಿರುದ್ಧ ಧ್ವನಿ ಎತ್ತಿದ್ದವರನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

ನನ್ ಮೇಲಿನ  ಲೈಂಗಿಕ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ರೊಮನ್ ಕ್ಯಾಥೋಲಿಕ್ ಚಾರ್ಚ್  ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಈಗಾಗಲೇ ಭಾರತದಲ್ಲಿ ಚರ್ಚ್ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ವಿಚಾರದಲ್ಲಿ ಪೋಪ್ ಮಧ್ಯ ಪ್ರವೇಶಿಸಿ ಸಿಸ್ಟರ್ ಗಳನ್ನು ದೌರ್ಜನ್ಯದಿಂದ ಮುಕ್ತಗೊಳಿಸುವಂತೆ  ಸ್ವಾಮಿ ಅಗ್ನಿವೇಶ್ ಒತ್ತಾಯಿಸಿದ್ದಾರೆ.

ಈ ಮಧ್ಯೆ ನಾಲ್ವರು ಕ್ರೈಸ್ತ ಸನ್ಯಾಸಿನಿಯರು  ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಕೇಸ್ ಇತ್ಯರ್ಥಗೊಳ್ಳುವವರಿಗೂ ವರ್ಗಾವಣೆ ಆದೇಶ ಜಾರಿಯಾಗದಂತೆ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com