ನಿಮ್ಮ ರಾಹುಲ್, ಸೋನಿಯಾ ಸಿದ್ಧಗಂಗಾ ಶ್ರೀಗಳ ದರ್ಶನಕ್ಕೆ ಬರದೇ ಎಲ್ಲಿ ಹೋಗಿದ್ರು?: ಮೋದಿ ಪ್ರಶ್ನಿಸಿದ ಪರಮ್ ಗೆ ಸಿಂಹ ಮರು ಪ್ರಶ್ನೆ!

ಸಿದ್ಧಗಂಗೆ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ಬಾರದೇ ಇದ್ದದ್ದನ್ನು ಪ್ರಶ್ನಿಸಿದ್ದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Updated on: 
ಸಿದ್ಧಗಂಗೆ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ಬಾರದೇ ಇದ್ದದ್ದನ್ನು ಪ್ರಶ್ನಿಸಿದ್ದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 
ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಆಗಮಿಸದೇ ಇದ್ದಿದ್ದನ್ನು ಆಕ್ಷೇಪಿಸಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್, ಸಿನಿಮಾ ನಟರನ್ನು ಭೇಟಿ ಮಾಡಲು, ಉದ್ಯಮಿಗಳ ಮಕ್ಕಳ ಮದುವೆಗೆ ಹೋಗಲು ಮೋದಿ ಸಮಯ ಇರುತ್ತದೆ. ಆದರೆ ಶತಾಯುಷಿ, ತ್ರಿವಿಧ ದಾಸೋಹಿ, ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಲು ಮೋದಿಗೆ ಸಮಯವಿರಲಿಲ್ಲ ಎಂದು ಟ್ವೀಟರ್‌ ಮೂಲಕ ಟಾಂಗ್‌ ನೀಡಿದ್ದರು.  
ಪರಮೇಶ್ವರ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ ಶ್ರೀಗಳಿಗೆ ಅಂತಿಮ ಗೌರವ ಸಲ್ಲಿಸಲು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಂದಿದ್ರಾ? ಅವರೆಲ್ಲಿ ಹೋಗಿದ್ದರು, ಇದಕ್ಕೆ ಉತ್ತರಿಸುತ್ತೀರಾ? ಎಂದು ಮರು ಪ್ರಶ್ನೆ ಹಾಕಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com