70ನೇ ಗಣರಾಜ್ಯೋತ್ಸವ: ದೆಹಲಿಯಲ್ಲಿ ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ಕೋವಿಂದ್

70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ಕೋವಿಂದ್
ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ: 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು.
ದೆಹಲಿಯಲ್ಲಿ ಇಂದು 70ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತಿದ್ದು, ದಟ್ಟ ಮಂಜು ಕವಿದ ವಾತಾವರಣವಿದ್ದರಿಂದ ದ್ವಜಾರೋಹಣವನ್ನು ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಯಿತು.ದೆಹಲಿಯ ರಾಜಪಥ್​​ನಲ್ಲಿ ಗಣರಾಜ್ಯೋತ್ಸವ ಪರೇಡ್​ ಆರಂಭವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅಸ್ಸಾಂ ರೈಫಲ್ಸ್​​ನ ಆಲ್​ ವುಮೆನ್​ ಕಾಂಟಿಂಜೆಂಟ್ ರಾಜಪಥ್​​ನಲ್ಲಿ ಪಥಸಂಚಲನ ಮಾಡುತ್ತಿವೆ. 
ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​, 'ಭಾರತದ ಬಹುಸಾಂಸ್ಕೃತಿಕತೆಯೇ ದೇಶದ ಶಕ್ತಿ. ವೈವಿಧ್ಯತೆ, ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯ ಮೇಲೆ ಭಾರತದ ಮಾಡೆಲ್​​ ನಿಂತಿದೆ ಎಂದರು. ಇದೇ ವೇಳೆ ಕೋವಿಂದ್​, ಮೇಲ್ವರ್ಗ ಮೀಸಲಾತಿಗೆ ಬೆಂಬಲ ಸೂಚಿಸಿದ್ರು. ಇದು ಮಹಾತ್ಮಾ ಗಾಂಧಿ ಕನಸಿನ ಭಾರತದತ್ತ ಮತ್ತೊಂದು ಹೆಜ್ಜೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅಮರ್​ ಜವಾನ್​​ ಜ್ಯೋತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕ ಚಾಲನೆ ನೀಡಿದರು.  ಬಳಿಕ ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿ ಗಣರಾಜ್ಯೋತ್ಸವ ಕಾರ್ಯಕ್ರಮದ ಅತಿಥಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ಸ್ವಾಗತಿಸಿದರು. 
ಇದೇ ವೇಳೆ ಹುತಾತ್ಮ ಯೋಧ ಲ್ಯಾನ್ಸ್​ ನಾಯಕ್​​ ನಾಜಿರ್​ ಅಹ್ಮದ್​ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿದರು. ವಾನಿ ಅವರ ಪತ್ನಿ ಮಹಾಜಬೀನ್ ರಾಷ್ಟ್ರಪತಿಗಳಿಂದ​​ ಪ್ರಶಸ್ತಿ ಸ್ವೀಕರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com