ಪದ್ಮಭೂಷಣ ಪ್ರಶಸ್ತಿ ಪಡೆದ ವ್ಯಕ್ತಿಗೆ ಭಾರತ ರತ್ನ ನೀಡಲು ಕನಿಷ್ಟ 5 ವರ್ಷ ಕಾಯಬೇಕಾ? ಅಸಲಿಯತ್ತೇನು ಇಲ್ಲಿದೆ ಮಾಹಿತಿ

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರ್ಕಾರ ಈ ಬಾರಿಯೂ ಭಾರತ ರತ್ನ ಪ್ರಶಸ್ತಿ ಘೋಷಿಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮೋದಿ-ಶಿವಕುಮಾರ ಸ್ವಾಮೀಜಿ
ಮೋದಿ-ಶಿವಕುಮಾರ ಸ್ವಾಮೀಜಿ
ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರ್ಕಾರ ಈ ಬಾರಿಯೂ ಭಾರತ ರತ್ನ ಪ್ರಶಸ್ತಿ ಘೋಷಿಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 
ಈ ನಡುವೆಯೇ ಶ್ರೀಗಳಿಗೆ ಈ ಬಾರಿ ಏಕೆ ಭಾರತ ರತ್ನ ಘೋಷಣೆ ಮಾಡಿಲ್ಲ ಎಂಬುದಕ್ಕೆ ಅನೇಕ ವಿಧವಾದ ವಿಶ್ಲೇಷಣೆಗಳು, ಸಮರ್ಥನೆಗಳೂ ಬರುತ್ತಿವೆ. ಈ ಪೈಕಿ ಪದ್ಮ ಪ್ರಶಸ್ತಿ ನೀಡಿದ ವ್ಯಕ್ತಿಗೆ ಯಾವುದೇ ಉನ್ನತವಾದ  ಪ್ರಶಸ್ತಿಯನ್ನು ನೀಡುವುದಕ್ಕೆ ಕನಿಷ್ಟ 5 ವರ್ಷಗಳಾಗಿರಬೇಕೆಂಬ ನಿಯಮವನ್ನು ಮುಂದಿಟ್ಟು ಪ್ರಶಸ್ತಿ ಘೋಷಣೆಯಾಗದೇ ಇರುವುದನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. 
ಇದಕ್ಕೆ ಸಾಕ್ಷ್ಯವನ್ನು ಒದಗಿಸಿರುವ ಸಾಮಾಜಿಕ ಜಾಲತಾಣದ ಹಲವು ಪೇಜ್ ಗಳು ಹಾಗೂ ವ್ಯಕ್ತಿಗಳು ಪದ್ಮ ಪ್ರಶಸ್ತಿಯನ್ನು ನೀಡುವುದಕ್ಕೆ ಇರುವ, ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿತ ಮಾನದಂಡಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದರಲ್ಲಿ 
ಒಬ್ಬ ವ್ಯಕ್ತಿಗೆ ಈಗಾಗಲೇ ಪದ್ಮ ಪ್ರಶಸ್ತಿಯ ಯಾವುದೇ ಕೆಟಗರಿಯಲ್ಲಿ ಪ್ರಶಸ್ತಿ ಬಂದಿದೆ ಎಂದಾರೆ ಅದಕ್ಕಿಂತಲೂ ಉನ್ನತವಾದ ಪದ್ಮ ಪ್ರಶಸ್ತಿಯನ್ನು ನೀಡಲು ಕನಿಷ್ಟ 5 ವರ್ಷದ ವರೆಗೆ ಕಾಯಬೇಕೆಂಬ ನಿಯಮವಿದೆ. 
(A higher category of Padma award can be conferred on a person only where a period of at least five years has elapsed since conferment of the earlier Padma award.  ಎಂಬ ಸಾಲುಗಳನ್ನು ಉಲ್ಲೇಖಿಸಲಾಗುತ್ತಿದೆ. ಆದಾಗಿಯೂ, ವಿಶೇಷ ಸಂದರ್ಭಗಳಲ್ಲಿ ಒಂದು ಪದ್ಮ ಪ್ರಶಸ್ತಿ ನೀಡಿದ ಅದೇ ವ್ಯಕ್ತಿಯ ಸಾಧನೆಯನ್ನು ಪರಿಗಣಿಸಿ 5 ವರ್ಷಗಳಲ್ಲಿ ಮತ್ತೊಂದು ಪದ್ಮ ಪ್ರಶಸ್ತಿಯನ್ನು ನೀಡುವುದಕ್ಕೂ ವಿಶೇಷ ಅಧಿಕಾರವಿದೆ.  ಆದರೆ ಕನಿಷ್ಟ 5 ವರ್ಷಗಳ ನಿಯಮ ಪದ್ಮ ಪ್ರಶಸ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಭಾರತ ರತ್ನ ಪ್ರಶಸ್ತಿಗೆ ಅನ್ವಯವಾಗುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ. ಇದಕ್ಕೆ ಪೂರಕವೆಂಬಂತೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಪದ್ಮ ಪ್ರಶಸ್ತಿ ನೀಡಿದ 5 ವರ್ಷಗಳ ಒಳಗಾಗಿಯೇ ಭಾರತ ರತ್ನ ಪ್ರಶಸ್ತಿಯೂ ಸಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com