ಬಿಜೆಪಿಗೆ ಅಸಹಾಯಕ ಪರಿಸ್ಥಿತಿ ಇಲ್ಲ: ಶಿವಸೇನೆ 'ದೊಡ್ಡಣ್ಣ' ಹೇಳಿಕೆಗೆ ಮಹಾ ಸಿಎಂ ತಿರುಗೇಟು

ಬಿಜೆಪಿ ರಾಜ್ಯದಲ್ಲಿ ಶಿವಸೇನೆ ಜತೆ ಮೈತ್ರಿ ಬಯಸುತ್ತದೆ. ಆದರೆ ಕೇಸರಿ ಪಡೆಗೆ ಅಸಹಾಯಕ ಪರಿಸ್ಥಿತಿ ಇಲ್ಲ ಎಂದು ಶಿವಸೇನೆಯ ದೊಡ್ಡಣ್ಣ ಹೇಳಿಕೆಗೆ...
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
Updated on: 
ಮುಂಬೈ: ಬಿಜೆಪಿ ರಾಜ್ಯದಲ್ಲಿ ಶಿವಸೇನೆ ಜತೆ ಮೈತ್ರಿ ಬಯಸುತ್ತದೆ. ಆದರೆ ಕೇಸರಿ ಪಡೆಗೆ ಅಸಹಾಯಕ ಪರಿಸ್ಥಿತಿ ಇಲ್ಲ ಎಂದು ಶಿವಸೇನೆಯ ದೊಡ್ಡಣ್ಣ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ಇಂದು ಬೆಳಗ್ಗಷ್ಟೇ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಿವಸೇನೆಯೇ ದೊಡ್ಡಣ್ಣ ಮತ್ತು ಅದು ಹಾಗೆಯೇ ಉಳಿಯಬೇಕು ಎಂದು ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರೌತ್ ಅವರು ಹೇಳಿದ್ದರು. 
ರೌತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾ ಸಿಎಂ, ಬಿಜೆಪಿ ಅಸಹಾಯಕ ಸ್ಥಿತಿಯಲ್ಲಿಲ್ಲ. ಹೌದು, ಅವರೊಂದಿಗೆ ನಮಗೆ ಮೈತ್ರಿ ಬೇಕು. ಆದರೆ ದೇಶದ ಅಭಿವೃದ್ಧಿಗಾಗಿ. ಅಧಿಕಾರಕ್ಕಾಗಿ ಅಲ್ಲ. ಹಲವು ದಶಕಗಳಿಂದ ಈ ದೇಶವನ್ನು ಲೂಟಿ ಮಾಡಿದ ಜನರ ಕೈಗೆ ಮತ್ತೆ ಅಧಿಕಾರ ನೀಡಲು ಸಿದ್ಧರಿಲ್ಲ. ಹೀಗಾಗಿ ಶಿವಸೇನೆ ಜತೆ ಮೈತ್ರಿಗೆ ಯತ್ನಿಸುತ್ತಿದ್ದೇವೆ ಎಂದರು.
ಬಿಜೆಪಿ 2 ಸ್ಥಾನಗಳಿಂದ 200 ಸ್ಥಾನ ಗಳಿಸಿದ ಪಕ್ಷ. 289 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯೇ ಏಕೈಕ ದೊಡ್ಡ ಪಕ್ಷ ಎಂಬುದು ಮರೆಯದಿರಿ. ಶಿವಸೇನೆ ಕೇವಲ 63 ಶಾಸಕರನ್ನು ಹೊಂದಿದೆ ಎಂದು ಫಡ್ನವಿಸ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com