ಡಿಎಚ್‌ಎಫ್‌ಎಲ್‌ನಿಂದ 31 ಸಾವಿರ ಕೋಟಿ ರು. ವರ್ಗಾವಣೆ: ತನಿಖೆಗೆ ಆಗ್ರಹಿಸಿದ ಯಶವಂತ್ ಸಿನ್ಹಾ

ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್...
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ
ನವದೆಹಲಿ: ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್ಎಫ್ಎಲ್) ಸಾವಿರಾರೂ ಕೋಟಿಯಷ್ಟು ಸಾಲ ನೀಡಿತ್ತು ಎಂದು ಕೋಬ್ರಾ ಪೋಸ್ಟ್ ವರದಿ ಮಾಡಿದ್ದು ಈ ವರದಿ ಆಧರಿಸಿ ತನಿಖೆಗೆ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಆಗ್ರಹಿಸಿದ್ದಾರೆ. 
ಕೋಬ್ರಾಪೋಸ್ಟ್ ವರದಿಯಲ್ಲಿ ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಒಂದೇ ವಿಳಾಸದಲ್ಲಿ ಕಾರ್ಯ ನಿರ್ವಹಿಸುವ ಹಲವು ಕಂಪನಿಗಳಿಗೆ ಚುನಾವಣೆ ಅವಧಿಯಲ್ಲಿ ಕೋಟ್ಯಂತರ ರುಪಾಯಿ ಹಣ ಮಂಜೂರು ಮಾಡಲಾಗಿದೆ ಎಂದು ದೂರಿತ್ತು. 
ಡಿಎಚ್ಎಫ್ಎಲ್ ಮೂಲ ಪ್ರವರ್ತಕರು 31,000 ಕೋಟಿ ಮೊತ್ತದಷ್ಟು ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಶೆಲ್(ನಕಲಿ) ಕಂಪನಿಗಳಿಗೆ ಸಾಲ ಕೊಡುವುದೂ ಸೇರಿದಂತೆ ಹಲವು ಮಾರ್ಗಗಳನ್ನು ಬಳಸಲಾಗಿದೆ. ಈ ಹಣವು ಬ್ರಿಟನ್, ದುಬೈ, ಶ್ರೀಲಂಕಾ ಮತ್ತು ಮಾರಿಷಸ್ ಸೇರಿ ಹಲವು ದೇಶಗಳಲ್ಲಿ ಹೂಡಿಕೆಯಾಗಿದೆ ಎಂದು ಕೋಬ್ರಾಪೋಸ್ಟ್ ಹೇಳಿತ್ತು.
ಡಿಎಚ್ಎಫ್ಎಲ್ಗೆ ಎಸ್ಬಿಐ 11 ಸಾವಿರ ಕೋಟಿ ಮತ್ತು ಬ್ಯಾಂಕ್ ಬರೋಡ 4 ಸಾವಿರ ಕೋಟಿ ಸಾಲ ನೀಡಿವೆ. ವಾಧ್ವಾನ್ ಕುಟುಂಬ ಬೇರೆ ಹೆಸರಿನಲ್ಲಿ ಸಾಲ ಪಡೆದುಕೊಂಡು ಡಿಎಚ್ಎಫ್ಎಲ್ಗೆ ವಂಚಿಸಿರುವುದರಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗೆ ಭಾರೀ ನಷ್ಟವಾಗಲಿದೆ ಎಂದು ಕೋಬ್ರಾಪೋಸ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com