ಸಂಗಮದಲ್ಲಿ ಎಲ್ಲರೂ ನಗ್ನ: ಯೋಗಿ ಬಗ್ಗೆ ತರೂರ್ ಟ್ವೀಟ್; ಸೂಟು, ಟೈ ಹಾಕ್ಕೊಂಡು ಹೋಗ್ತಾರಾ?: ಬಿಜೆಪಿ ತಿರುಗೇಟು

ಪವಿತ್ರ ಕುಂಭಮೇಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೆಂಟ್ ಸಿಟಿಯಲ್ಲಿ ಸಂಪುಟ ಸಭೆಯನ್ನೂ ನಡೆಸಿ ಜ.29 ರಂದು ಪವಿತ್ರ ಸ್ನಾನವನ್ನೂ ಮಾಡಿದ್ದರು. ಈ ಬಗ್ಗೆ....
ಕುಂಭಮೇಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಕುಂಭಮೇಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಕುಂಭಮೇಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೆಂಟ್ ಸಿಟಿಯಲ್ಲಿ ಸಂಪುಟ ಸಭೆಯನ್ನೂ ನಡೆಸಿ ಜ.29 ರಂದು ಪವಿತ್ರ ಸ್ನಾನವನ್ನೂ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿದ್ದ ಟ್ವೀಟ್ ಗೆ ಈಗ ಭಾರಿ ಟೀಕೆ ವ್ಯಕ್ತವಾಗುತ್ತಿವೆ. 
ಯೋಗಿ ಆದಿತ್ಯನಾಥ್, ಸಂಪುಟ ಸಹೋದ್ಯೋಗಿಗಳು, ಸಾಧು ಸಂತರೊಂದಿಗೆ ಪ್ರಯಾಗ್ ರಾಜ್ ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಅಣಿಯಾಗಿರುವ ಫೋಟೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಶಶಿ ತರೂರ್, ಗಂಗೆಯನ್ನು ಸ್ವಚ್ಛವೂ ಮಾಡಬೇಕು, ಅಲ್ಲೇ ಪಾಪವನ್ನೂ ತೊಳೆಯಬೇಕು, ನದಿಯ ಸಂಗಮದಲ್ಲಿ ಎಲ್ಲರೂ ನಗ್ನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಬಿಜೆಪಿ ಪಕ್ಷ, ಟ್ವಿಟರ್ ನಲ್ಲಿರುವ ಹಲವರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 
ಶಶಿ ತರೂರ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ, ನಳಿನ್ ಕೊಹ್ಲಿ, ತಿಳುವಳಿಕೆ ಹೊಂದಿರುವ, ವಿದ್ಯಾವಂತ ಶಶಿ ತರೂರ್ ಅವರಿಂದ ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಈ ರೀತಿಯ ಹೇಳಿಕೆ ದುರದೃಷ್ಟಕರ ಎಂದು ಹೇಳಿದ್ದಾರೆ. ಶಶಿ ತರೂರ್ ಇದೇ ರೀತಿಯಲ್ಲಿ ಇಸ್ಲಾಮ್ ಹಾಗೂ ಕ್ರೈಸ್ತ ಮತದ ಧಾರ್ಮಿಕ ಆಚರಣೆ, ನಂಬಿಕೆಗಳ ಬಗ್ಗೆಯೂ ಟ್ವೀಟ್ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಯಾರಾದರೂ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ತೆರಳುವಾಗ ಸೂಟ್, ಟೈ ಹಾಕಿಕೊಂಡು ಹೋಗುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. 
ಇನ್ನು ಸಾರ್ವಜನಿಕರಿಂದಲೂ ಟ್ವಿಟರ್ ನಲ್ಲಿ ತರೂರ್ ಗೆ ವಿರೋಧ ವ್ಯಕ್ತವಾಗಿದ್ದು ಮಾಜಿ ಪ್ರಧಾನಿ ನೆಹರು ಪವಿತ್ರ ಸ್ನಾನ ಮಾಡಲು ಅಣಿಯಾಗುತ್ತಿರುವ ಹಳೆಯ ಫೋಟೊವೊಂದನ್ನು ಹಂಚಿಕೊಂಡಿದ್ದು, ಗಂಗೆಯಲ್ಲಿ ಪಾಪ ತೊಳೆಯುತ್ತಿರುವ ನಿಮ್ಮ ಪಕ್ಷದ ನಾಯಕ ನೆಹರು, ಅವರೂ ನಗ್ನರಾಗಿದ್ದರು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com