ದೆಹಲಿ ಕೋಮುಗಲಭೆ: ಪೊಲೀಸ್ ಆಯುಕ್ತರಿಗೆ ಗೃಹ ಸಚಿವ ಅಮಿತ್ ಶಾ ಕ್ಲಾಸ್

ದೆಹಲಿಯ ಹೌಜ್ ಕಾಜಿ ಕೋಮುಗಲಭೆ ಘಟನೆ ನಡೆದಿರುವುದಕ್ಕೆ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿ ಕೋಮುಗಲಭೆ: ಪೊಲೀಸ್ ಆಯುಕ್ತರಿಗೆ ಗೃಹ ಸಚಿವ ಅಮಿತ್ ಶಾ ಕ್ಲಾಸ್
ದೆಹಲಿ ಕೋಮುಗಲಭೆ: ಪೊಲೀಸ್ ಆಯುಕ್ತರಿಗೆ ಗೃಹ ಸಚಿವ ಅಮಿತ್ ಶಾ ಕ್ಲಾಸ್
Updated on
ನವದೆಹಲಿ: ದೆಹಲಿಯ ಹೌಜ್ ಕಾಜಿ ಕೋಮುಗಲಭೆ ಘಟನೆ ನಡೆದಿರುವುದಕ್ಕೆ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಪೊಲೀಸ್ ಆಯುಕ್ತರು ಸಾಮಾನ್ಯದ ಸಭೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಜನರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಇಬ್ಬರನ್ನು ಪತ್ತೆ ಮಾಡಲಾಗಿದ್ದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
ಇದೇ ವೇಳೆ ದೆಹಲಿಯಲ್ಲಿ ಕೋಮುಗಲಭೆ ನಡೆದು ಎರಡು ದಿನಗಳಾದರೂ ಮಧ್ಯಪ್ರವೇಶಿಸದ ಬಗ್ಗೆ ಕಾಂಗ್ರೆಸ್ ಕೇಂದ್ರ ಹಾಗೂ ಅಮಿತ್ ಶಾ ರನ್ನು ಪ್ರಶ್ನಿಸಿದೆ. ಕೋಮು ಗಲಭೆ ನಡೆದು ಎರಡು ದಿನಗಳಾಗಿವೆ. ಆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷ ಅಲ್ಪಸಂಖ್ಯಾತರ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದು ಗೊತ್ತಿತ್ತು ಆದರೆ ಬಹುಸಂಖ್ಯಾತರ ವಿಷಯದಲ್ಲಿಯೂ ಅದಕ್ಕೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. 
ದೆಹಲಿಯಲ್ಲಿ ಪಾರ್ಕಿಂಗ್ ವಿಷಯವಾಗಿ ಘರ್ಷಣೆ  ಉಂಟಾಗಿ ದೇವಾಲಯವನ್ನು ಅನ್ಯಕೋಮಿನವರು ಹಾಳುಗೆಡವಿದ್ದರು. ಪರಿಣಾಮ ಕೋಮುಗಲಭೆ ಉಂಟಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com