ಲಡಾಕ್ ನಲ್ಲಿ ಸೈನಿಕರ ಒಳನುಸುಳುವಿಕೆ ಆಗಿಲ್ಲ: ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್

ಲಡಾಖ್‌ನ ಡೆಮ್‌ಚೋಕ್ ವಲಯದಲ್ಲಿ ಚೀನಿಯರಿಂದ ಯಾವುದೇ ...
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
Updated on
ನವದೆಹಲಿ: ಲಡಾಖ್‌ನ ಡೆಮ್‌ಚೋಕ್ ವಲಯದಲ್ಲಿ ಚೀನಿಯರಿಂದ ಯಾವುದೇ ಒಳನುಸುಳುವಿಕೆ ಕಂಡುಬಂದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಚೀನಾ ಕಡೆಯಿಂದ ಯಾವುದೇ ಒಳನುಸುಳುವಿಕೆ ಆಗಿಲ್ಲ ಎಂದು ರಾವತ್ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೊನ್ನೆ ಜುಲೈ 6ರಂದು ದಲೈ ಲಾಮಾ ಅವರ ಹುಟ್ಟುಹಬ್ಬದ ಪ್ರಯುಕ್ತ ಟಿಬೆಟಿಯನ್ನರು ಟಿಬೆಟ್  ಧ್ವಜವನ್ನು ಹಾರಿಸಿದ್ದರಿಂದ ಚೀನಾದ ಸೈನಿಕರು ಕಳೆದ ವಾರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿಗಳು ಬಂದಿದ್ದವು.
ಚೀನಾದ ಸೈನಿಕರು ಬಂದು ತಮ್ಮ ನಿಜವಾದ ಗಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಾರೆ. ಅವರು ನಮ್ಮ ಗಡಿಯೊಳಗೆ ನುಗ್ಗದಂತೆ ನಾವು ತಡೆಯುತ್ತೇವೆ. ಆದರೆ ಆ ಸಂದರ್ಭದಲ್ಲಿ ಟಿಬೆಟಿಯನ್ನರು ನಮ್ಮ ಗಡಿಯೊಳಗೆ ಡೆಮ್ ಚೋಕ್ ವಲಯದಲ್ಲಿ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದರು. ಅದನ್ನು ನೋಡಿ ಕೆಲವು ಚೀನೀಯರು ಅಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಬಂದರಷ್ಟೆ ಹೊರತು ಒಳನುಸುಳುವಿಕೆಯಾಗಿಲ್ಲ. ಅಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದರು.
ಭಾರತ ಮತ್ತು ಚೀನಾ ಗಡಿಯ ಡೋಕ್ಲಮ್ ನಲ್ಲಿ ಎರಡು ವರ್ಷಗಳ ಹಿಂದೆ ವಿವಾದವುಂಟಾಗಿ 73 ದಿನಗಳ ಕಾಲ ಎರಡೂ ರಾಷ್ಟ್ರಗಳ ಸೈನಿಕರು ಘರ್ಷಣೆಯಲ್ಲಿ ನಿರತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com