ಕಲರಾಜ್ ಮಿಶ್ರಾ
ಕಲರಾಜ್ ಮಿಶ್ರಾ

ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ಕಲರಾಜ್ ಮಿಶ್ರಾ ನೇಮಕ, ಆಚಾರ್ಯ ದೇವ್ರತ್ ಗುಜರಾತ್ ಗೆ ವರ್ಗಾ

ಬಿಜೆಪಿ ಹಿರಿಯ ನಾಯಕ ಕಲರಾಜ್ ಮಿಶ್ರಾ ಅವರನ್ನು ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಹಾಲಿ ರಾಜ್ಯಪಾಲ ಆಚಾರ್ಯ...
Published on
ನವದೆಹಲಿ: ಬಿಜೆಪಿ ಹಿರಿಯ ನಾಯಕ ಕಲರಾಜ್ ಮಿಶ್ರಾ ಅವರನ್ನು ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಹಾಲಿ ರಾಜ್ಯಪಾಲ ಆಚಾರ್ಯ ದೇವ್ರತ್ ಅವರನ್ನು ಗುಜರಾತ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ.
ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಕಲರಾಜ್ ಮಿಶ್ರಾ ಅವರನ್ನು ಹಾಗೂ ಗುಜರಾತ್ ರಾಜ್ಯಪಾಲರನ್ನಾಗಿ ಆಚಾರ್ಯ ದೇವ್ರತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಇಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
78 ವರ್ಷದ ಕಲರಾಜ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದಾರೆ. ವಯಸ್ಸಿನ ಕಾರಣದಿಂದ ಅವರು 2017ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗುಜರಾತ್ ರಾಜ್ಯಪಾಲ ಒಪಿ ಕೊಹ್ಲಿ ಅವರು ಇಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ 60 ವರ್ಷದ ಆಚಾರ್ಯ ದೇವ್ರತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com