ಉತ್ತರ ಪ್ರದೇಶ: ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಗೆ ಥಳಿತ
ದೇಶ
ಉತ್ತರ ಪ್ರದೇಶ: ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಗೆ ಥಳಿತ
ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಯನ್ನು ಯುವಕರ ತಂಡ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಾಘ್ಪಟ್ ನಲ್ಲಿ ನಡೆದಿದೆ.
ಬಾಘ್ಪಟ್: ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಯನ್ನು ಯುವಕರ ತಂಡ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಾಘ್ಪಟ್ ನಲ್ಲಿ ನಡೆದಿದೆ.
ಮೌಲ್ವಿ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ದ್ವಿಚಕ್ರವಾಹನದಲ್ಲಿ ಬಂದ ಯುವಕರ ತಂಡ ಜೈ ಶ್ರೀರಾಮ್ ಮಂತ್ರ ಪಠಿಸುವಂತೆ ಒತ್ತಾಯಿಸಿದ್ದಾರೆ. ಹೇಳಲು ನಿರಾಕರಿಸಿದ್ದಕ್ಕೆ ತಮ್ಮನ್ನು ಅಮಾನುಷವಾಗಿ ಥಳಿಸಿ ಟೋಪಿ ಕಿತ್ತೆಸೆದ ಗಡ್ಡ ಹಿಡಿದು ಎಳೆದಿದ್ದಾರೆ ಎಂದು ಮೌಲ್ವಿ ಇಮ್ಲೌರ್ ರೆಹಮಾನ್ ಹೇಳಿದ್ದಾರೆ. ಈ ಘಟನೆ ನಡೆಯುತ್ತಿದ್ದರೂ ಜನತೆ ಮೂಕಪ್ರೇಕ್ಷಕರಾಗಿದ್ದರೇ ಹೊರತು ರಕ್ಷಣೆಗೆ ಯಾರೂ ಧಾವಿಸಲಿಲ್ಲ ಎಂದು ಮೌಲ್ವಿ ಹೇಳಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿದವರು ಮಾರಕಾಸ್ತ್ರಗಳನ್ನು ಹೊಂದಿದ್ದರು. ನನ್ನ ಜೀವ ಉಳಿಸಿಕೊಳ್ಳುವುದಕ್ಕೆ ಓಡಲು ಪ್ರಾರಂಭಿಸಿದೆ. ಯಾರೂ ನನ್ನ ನೆರವಿಗೆ ಧಾವಿಸಲಿಲ್ಲ ನಂತರ ನನ್ನ ಸ್ನೇಹಿತನಿಗೆ ಕರೆ ಮಾಡಿ ಆತನ ನೆರವಿನಿಂದ ಅಧಿಕಾರಿಗಳ ಸಹಾಯ ಪಡೆದು ಪಾರಾದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ