ಔರಂಗಾಬಾದ್: ಜೈ ಶ್ರೀರಾಮ್ ಪಠಿಸುವಂತೆ ಮುಸ್ಲಿಂ ಯುವಕರಿಗೆ ಬೆದರಿಕೆ

ಜೈ ಶ್ರೀ ರಾಮ್ ಎಂದು ಪಠಿಸುವಂತೆ ಇಬ್ಬರು ಮುಸ್ಲಿಂ ಯುವಕರ ಮೇಲೆ ಬೆದರಿಕೆ ...
ಬೆದರಿಕೆಗೊಳಗಾದ ಯುವಕರು
ಬೆದರಿಕೆಗೊಳಗಾದ ಯುವಕರು
Updated on
ಔರಂಗಾಬಾದ್(ಮಹಾರಾಷ್ಟ್ರ): ಜೈ ಶ್ರೀ ರಾಮ್ ಎಂದು ಪಠಿಸುವಂತೆ ಇಬ್ಬರು ಮುಸ್ಲಿಂ ಯುವಕರ ಮೇಲೆ ಬೆದರಿಕೆ ಹಾಕಿದ ಘಟನೆ ಇಲ್ಲಿನ ಆಜಾದ್ ಚೌಕ್ ಬಳಿ ನಡೆದಿದೆ.
ಶೈಕ್ ಆಮರ್ ಎಂಬ ಯುವಕ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿ, ತಾನು ಮತ್ತು ತನ್ನ ಸ್ನೇಹಿತ ಕೆಲಸಕ್ಕೆ ಹೋದ ಸಮಯದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಪಠಿಸುವಂತೆ ಒತ್ತಾಯಿಸಿದರು. ಅದಕ್ಕೆ ನಾವು ನಿರಾಕರಿಸಿದಾಗ ನಮ್ಮ ಮೇಲೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾದರು ಎಂದು ಹೇಳಿದರು.
ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಕಾನೂನು ರಕ್ಷಣೆಗೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 
ಕೇಸಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಜನರು ಶಾಂತಿ ಸುವ್ಯವಸ್ಥೆಗೆ ಸಹಕರಿಸಿ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿರುವುದಾಗಿ ಔರಂಗಾಬಾದ್ ಪೊಲೀಸ್ ಆಯುಕ್ತ ಚಿರಂಜೀವಿ ಪ್ರಸಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com