'ಯಡಿಯೂರಪ್ಪ ಅವರ ಕಥೆ ಗೋವಿಂದ ಗೋವಿಂದಾ...'

ನಮ್ಮನ್ನೇ ಬಿಟ್ಟಿಲ್ಲ, ಇನ್ನೂ ನಮ್ಮ ಅತೃಪ್ತ ಶಾಸಕರು ಬಿಎಸ್ ಯಡಿಯೂರಪ್ಪ ಅವರನ್ನು ಬಿಡ್ತಾರೆನ್ರಿ, ಯಡಿಯೂರಪ್ಪ ಅವರ ಕಥೆ ಗೋವಿಂದ ಗೋವಿಂದಾ..
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on
ಬೆಂಗಳೂರು: ನಮ್ಮನ್ನೇ ಬಿಟ್ಟಿಲ್ಲ, ಇನ್ನೂ ನಮ್ಮ ಅತೃಪ್ತ ಶಾಸಕರು ಬಿಎಸ್ ಯಡಿಯೂರಪ್ಪ ಅವರನ್ನು ಬಿಡ್ತಾರೆನ್ರಿ, ಯಡಿಯೂರಪ್ಪ ಅವರ ಕಥೆ ಗೋವಿಂದ ಗೋವಿಂದಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ,
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಅತೃಪ್ತರಲ್ಲ ಅವರು ಸಂತೃಪ್ತರು,.ವಿಧಾನಸಭೆಯಲ್ಲಿ ಎಲ್ಲವನ್ನು ಮಾತನಾಡಿದ್ದೇನೆ, ಸಿದ್ದರಾಮಯ್ಯ ನುಮ್ಮ ಸಿಎಲ್ ಪಿ ನಾಯಕ, ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದಾರೆ, ಮುಂದಿನ ಎಲ್ಲಾ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅತೃಪ್ತ ಶಾಸಕರು ಸುಮ್ಮನೇನಾ, ಶರ್ಟು-ಪ್ಯಾಂಟು ಹರಿದು ಕೈಗೆ ಕೊಡ್ತಾರೆ, ಇರೋದರಲ್ಲಿ ಮಹೇಶ್ ಕುಮಟಳ್ಳಿ ಮಾತ್ರ ಸೆಲೆಂಟ್ ಆಗಿ ಇರುತ್ತಾರೆ ಉಳಿದವರು ಅಸಾಧ್ಯ ಕಣ್ರಿ ಎಂದು ಎಚ್ಚರಿಕೆ ನೀಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com