ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವನ್ನೇ ಕಚ್ಚಿ ತುಂಡು ಮಾಡಿದ ಭೂಪ...!

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನಗೆ ಕಟ್ಟಿದ ಹಾವನ್ನೇ ಕಚ್ಚಿ ಮೂರು ತುಂಡು ಮಾಡಿದ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ರಾಜ್ ಕುಮಾರ್
ರಾಜ್ ಕುಮಾರ್
Updated on
ಇಟಾ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನಗೆ ಕಟ್ಟಿದ ಹಾವನ್ನೇ ಕಚ್ಚಿ ಮೂರು ತುಂಡು ಮಾಡಿದ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ. 
ಭಾನುವಾರ ರಾತ್ರಿ ಇಟಾ ಜಿಲ್ಲೆಯ ಅಸ್ರೌಲಿ ಗ್ರಾಮದ ರಾಜ್ ಕುಮಾರ್ ಎಂಬ ವ್ಯಕ್ತಿಗೆ ಹಾವು ಕಚ್ಚಿದೆ. ಇದರಿಂದ ಆಕ್ರೋಶಗೊಂಡ ರಾಜ್ ಕುಮಾರ್ ಹಾವನ್ನೇ ಕಚ್ಚಿ ತುಂಡರಿಸಿದ್ದಾನೆ. ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡ ರಾಜ್ ಕುಮಾರ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಆರೋಗ್ಯ ತುಂಬಾ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಜ್ ಕುಮಾರ್ ತಂದೆ ಬಾಬು ರಾಮ್, 'ನನ್ನ ಮಗ ಕುಡಿದಿದ್ದನು. ಹಾವು ನಮ್ಮ ಮನೆಗೆ ಪ್ರವೇಶಿಸಿ ಅವನನ್ನು ಕಚ್ಚಿತು. ನಂತರ ಅವನು ಹಾವನ್ನು ಕಚ್ಚಿ ಮೂರು ತುಂಡುಗಳಾಗಿ ಮಾಡಿದನು. ಅವನ ಸ್ಥಿತಿ ಗಂಭೀರವಾಗಿದೆ. ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.
'ರೋಗಿಯೊಬ್ಬರು ನನ್ನ ಬಳಿಗೆ ಬಂದು ತಾವು ಹಾವನ್ನು ಕಚ್ಚಿರುವುದಾಗಿ ಹೇಳಿದರು. ಆದರೆ ನಾನು ಹಾವು ಅವನನ್ನು ಕಚ್ಚಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ಎಂದು ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ರಾಜ್‌ಕುಮಾರ್ ಅವರ ಕುಟುಂಬವು ಹಾವನ್ನು ಅಂತ್ಯಕ್ರಿಯೆ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com