ಕೋಲ್ಕತ್ತಾ: ಹಿಂದಿ ಕಲಿಕೆಗೆ ಮಾನವ ಸಂಪನ್ಮೂಲ ಇಲಾಖೆಗೆ ಹೊರಡಿಸಿರುವ ಆದೇಶ ವಿವಾದಕ್ಕೀಡಾಗಿದ್ದು, ಹಿಂದಿ ಕಲಿಕೆಯನ್ನು ಕಡ್ದಾಯಗೊಳಿಸುವುದರ ವಿರುದ್ಧ ಈಗ ಪಶ್ಚಿಮ ಬಂಗಾಳವೂ ಧ್ವನಿ ಎತ್ತಿದೆ.
ಶಿಕ್ಷಣತಜ್ಞರು, ಬರಹಗಾರರ ಗುಂಪು ಹಿಂದಿ ಕಲಿಕೆಯನ್ನು ವಿರೋಧಿಸಿದ್ದು, ಶಾಲೆಗಳಲ್ಲಿ ಹಿಂದಿ ಹೇರಿಕೆ ಮಾಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಿಧಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ 8 ನೇ ತರಗತಿ ವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂಬಅಂಶವನ್ನು ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಒತ್ತಡ ಉಂಟಾಗಲಿದೆ ಎಂದು ರವೀಂದ್ರ ಭಾರತಿ ವಿವಿಯ ಉಪಕುಲಪತಿಗಳಾದ ಪ್ರತಿಭಾ ಸರ್ಕಾರ್ ಹೇಳಿದ್ದಾರೆ.
6,7, 8 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಹಿಂದಿ ಕಲಿಸಬಹುದು, ಆದರೆ 1 ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆ ಕಡ್ಡಾಯಗೊಳಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಬಂಗಾಳದಲ್ಲಿ ಹಿಂದಿ ಭಾಷಿಕರು ಬೆಂಗಾಲಿ ಭಾಷೆಯನ್ನು ಕಲಿಯುವಂತಾಗಬೇಕೆಂದು ಶಿಕ್ಷಣತಜ್ಞರು ಅಭಿಪ್ರಾಯಪಟ್ಟಿದ್ದಾರೆ.