ನಾಪತ್ತೆಯಾದ ಎಎನ್ 32 ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಐಎಎಫ್
ದೇಶ
ನಾಪತ್ತೆಯಾದ ಎಎನ್ 32 ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಐಎಎಫ್
ನಾಪತ್ತೆಯಾಗಿರುವ ವಿಮಾನ ಎಎನ್ 32 ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ.
ನವದೆಹಲಿ: ನಾಪತ್ತೆಯಾಗಿರುವ ವಿಮಾನ ಎಎನ್ 32 ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ.
ಈ ನಡುವೆ ಐಎಎಫ್ ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಶಿಲ್ಲಾಂಗ್ ನಲ್ಲಿರುವ ಈಸ್ಟರ್ನ್ ಏರ್ ಕಮಾಂಡ್ ನ ಏರ್ ಮಾರ್ಷಲ್ ಆರ್ ಡಿ ಮಥೂರ್ ಈ ಘೋಷಣೆ ಮಾಡಿದ್ದಾರೆ.
ನಾಪತ್ತೆಯಾಗಿರುವ ವಿಮಾನಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ವಿಮಾನ ಪತ್ತೆಯಾಗುವಂತಹ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಮಾಥೂರ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಸೇನಾ ಸಹಾಯವನ್ನೂ ಪಡೆದು ವಿಮಾನ ಹುಡುಕಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ