ಮಿ-17 ಪತನ: ಅಂತಿಮ ಹಂತದಲ್ಲಿ ಐಎಎಫ್ ತನಿಖೆ, 2 ಅಧಿಕಾರಿಗಳ ಕೋರ್ಟ್ ಮಾರ್ಷಲ್ ಸಾಧ್ಯತೆ
ದೇಶ
ಮಿ-17 ಪತನ: ಅಂತಿಮ ಹಂತದಲ್ಲಿ ಐಎಎಫ್ ತನಿಖೆ, 2 ಅಧಿಕಾರಿಗಳ ಕೋರ್ಟ್ ಮಾರ್ಷಲ್ ಸಾಧ್ಯತೆ
ಫೆ.27 ರಂದು ಮಿ-17 ವಿ5 ವಿಮಾನ ಪತನಗೊಂಡಿದ್ದ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ.
ಫೆ.27 ರಂದು ಮಿ-17 ವಿ5 ವಿಮಾನ ಪತನಗೊಂಡಿದ್ದ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ.
ಪತನಗೊಂಡ ಮಿ-17 ವಿಮಾನದಲ್ಲಿದ್ದ 6 ಜನರು ಮೃತಪಟ್ಟಿದ್ದರು. ರಕ್ಷಣಾ ವ್ಯವಸ್ಥೆ ಸ್ಪೈಡರ್ ಮಿ-17 ನ್ನು ಹೊಡೆದುರುಳಿಸಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು ಅಂತಿಮ ವರದಿ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ. ತನಿಖೆಯ ನಂತರಲ್ಲಿ ಕರ್ತವ್ಯ ಲೋಪದೋಷ ಉಂಟುಮಾಡಿದ್ದ ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ