ಪಂಜಾಬ್: ಸತತ 110 ಗಂಟೆಗಳ ಕಾರ್ಯಾಚರಣೆ, ಕೊಳವೆ ಬಾವಿಯಿಂದ ಹೊರತೆಗೆದಿದ್ದ ಬಾಲಕ ಸಾವು!

ಕಳೆದ ಗುರುವಾರ ಪಂಜಾಬ್ ನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತಾದರೂ, ದುರಾದೃಷ್ಟವಶಾತ್ ಆ ಬಾಲಕ ಸಾವನ್ನಪ್ಪಿದ್ದಾನೆ.
ಕೊಳವೆ ಬಾವಿಗೆ ಬಿದ್ದಿದ್ದ ಮಗು
ಕೊಳವೆ ಬಾವಿಗೆ ಬಿದ್ದಿದ್ದ ಮಗು
ಪಂಜಾಬ್: ಕಳೆದ ಗುರುವಾರ ಪಂಜಾಬ್ ನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತಾದರೂ, ದುರಾದೃಷ್ಟವಶಾತ್ ಆ  ಬಾಲಕ ಸಾವನ್ನಪ್ಪಿದ್ದಾನೆ.
ಜೂನ್ 6 ರಂದು ಪಂಜಾಬ್‌ ಸಂಗ್ರೂರ್ ನ ಭಗವಾನ್‌ಪೂರ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಫತೇಹ್ ವಿರ್ ಸಿಂಗ್‌ ನನ್ನು ಅಗ್ನಿ ಶಾಮಕ ದಳ, ತಜ್ಞರು ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಜೀವಂತವಾಗಿ ಹೊರತೆಗೆದಿದ್ದರು. ಆದರೆ ಇದೀಗ ಮಗು ಬದುಕುಳಿಯಲ್ಲಿಲ್ಲ ಎಂದು ಮಗುವಿನ ಅಜ್ಜ ರೋಹಿ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 
ಗುರುವಾರ (ಜೂನ್ 6) ಆಟ ಆಡುತ್ತಿರಬೇಕಾದರೆ ಸಂಜೆ 4 ಗಂಟೆ ಸಮಯದಲ್ಲಿ ಸುಮಾರು 150 ಅಡಿ ಆಳದ ಕೊಳವೆ ಬಾವಿಗೆ ಫತೇಹ್ ವಿರ್ ಸಿಂಗ್ ಬಿದ್ದಿದ್ದ. ವಿಚಾರ ತಿಳಿದ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌), ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಮಂಗಳವಾರ ಮುಂಜಾನೆ 5:12ಕ್ಕೆ ಮಗುವನ್ನು ರಕ್ಷಿಸಲಾಗಿತ್ತು. ಬಳಿಕ ಪೊಲೀಸರ ಬಿಗಿ ಭದ್ರತೆಯಲ್ಲಿ ಮಗುವನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. "ಫತೇಹ್‌ವಿರ್‌ನನ್ನು ಹೊರತೆಗೆಯಲಾಗಿದ್ದು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಇದೀಗ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಮಗು ಫತೇಹ್ ವಿರ್ ಸಿಂಗ್ 2 ವರ್ಷ ತುಂಬಿತ್ತು ಎಂದು ಆತನ ಪೋಷಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com