ಪಶ್ಚಿಮ ಬಂಗಾಳದಲ್ಲಿ ಕಡ್ಡಾಯವಾಗಿ ಬಂಗಾಳಿ ಮಾತನಾಡಬೇಕು: ದೀದಿ ತಾಕೀತು

ಪಶ್ಚಿಮ ಬಂಗಾಳದಲ್ಲಿರುವವರು ಕಡ್ಡಾಯವಾಗಿ ಬಂಗಾಳಿ ಭಾಷೆ. ಒಂದು ವೇಳೆ ಬಂಗಾಳಿ ಬರದಿದ್ದರೆ ಕಲಿಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ...
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿರುವವರು ಕಡ್ಡಾಯವಾಗಿ ಬಂಗಾಳಿ ಭಾಷೆ.  ಒಂದು ವೇಳೆ ಬಂಗಾಳಿ ಬರದಿದ್ದರೆ ಕಲಿಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರಾವರ ತಾಕೀತು ಮಾಡಿದ್ದಾರೆ. 
ವೈದ್ಯರ ಮುಷ್ಕರದ ಹಿಂದೆ ಬಂಗಾಳಿಯೇತರ ಜನರ ಕೈವಾಡ ಇದೆ ಎಂದು ಆರೋಪಿಸಿದ ದೀದಿ, ವೈದ್ಯರ ಪ್ರತಿಭಟನೆಯ ಕಿಡಿ ಹಚ್ಚಿದ್ದು ಹೊರಗಿನವರೇ ಎಂಬುದು ತಮಗೆ ಎಂದು ಎಂದರು.
ವೈದ್ಯರಿಗೆ ಹೊರಗಿನವರು ಪ್ರಚೋದನೆ ನೀಡುತ್ತಿದ್ದಾರೆ. ನಿನ್ನೆಯ ಪ್ರತಿಭಟನೆಯಲ್ಲಿ ಹೊರಗಿನವರು ಪಾಲ್ಗೊಂಡಿದ್ದರೆಂದು ನಾನು ಹೇಳಿದ್ದುನಿಜ. ಎಸ್​ಎಸ್​ಕೆಎಂ ಆಸ್ಪತ್ರೆಯಲ್ಲಿ ಹೊರಗಿನವರು ಘೋಷಣೆಗಳನ್ನ ಕೂಗುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದು ಟಿಎಂಸಿ ಮುಖ್ಯಸ್ಥೆ ದೂರಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಬಂಗಾಳದಲ್ಲಿ ಯಾರಾದರೂ ವಾಸಿಸುತ್ತಿದ್ದರೆ ಅವರು ಬಂಗಾಳಿ ಭಾಷೆಯನ್ನು ಕಲಿಯಬೇಕು ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಬಂಗಾಳದಲ್ಲಿ ಬಂಗಾಳಿ ಹಾಗೂ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮೆಷೀನ್​ಗಳನ್ನ ಪ್ರೋಗ್ರಾಮಿಂಗ್ ಮಾಡಿ ಕೆಲ ಸೀಟುಗಳನ್ನು ಗೆದ್ದ ಮಾತ್ರಕ್ಕೆ ಬಂಗಾಳಿಗಳು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವುದು ಬಡಿಯುವುದು ಮಾಡುವುದು ಸರಿಯಲ್ಲ. ನಾವು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com