ಮಾವಿನ ಹೊಸ ತಳಿಗೆ ಅಮಿತ್ ಶಾ ಹೆಸರಿಟ್ಟ ಕಲೀಮ್ ಉಲ್ಲಾ ಖಾನ್!

ಮಾವಿನ ಹಣ್ಣಿನ ಹೊಸ ತಳಿಗಳ ಸಂಶೋಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಪ್ರಖ್ಯಾತ ಮಾವು ಬೆಳೆಗಾರ ಮಾವಿನ ಹೊಸ ತಳಿಯನ್ನು ಪರಿಚಯಿಸಿದ್ದಾರೆ.
ಮಾವಿನ ಹೊಸ ತಳಿಗೆ ಅಮಿತ್ ಶಾ ಹೆಸರಿಟ್ಟ ಕಲೀಮ್ ಉಲ್ಲಾ ಖಾನ್!
ಮಾವಿನ ಹೊಸ ತಳಿಗೆ ಅಮಿತ್ ಶಾ ಹೆಸರಿಟ್ಟ ಕಲೀಮ್ ಉಲ್ಲಾ ಖಾನ್!
ನವದೆಹಲಿ: ಮಾವಿನ ಹಣ್ಣಿನ ಹೊಸ ತಳಿಗಳ ಸಂಶೋಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಪ್ರಖ್ಯಾತ ಮಾವು ಬೆಳೆಗಾರ ಮಾವಿನ ಹೊಸ ತಳಿಯನ್ನು ಪರಿಚಯಿಸಿದ್ದಾರೆ. 
ಮ್ಯಾಂಗೋ ಮ್ಯಾನ್ ಎಂದೇ ಖ್ಯಾತರಾಗಿರುವ ಹಾಜಿ ಕಲಿಮ್ -ಉಲ್ಲಾ-ಖಾನ್ ಹೊಸದಾಗಿ  ಪರಿಚಯಿಸಿರುವ ಮಾವಿನ ತಳಿಗೆ ಬಿಜೆಪಿ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ. 
ಅಮಿತ್ ಶಾ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿರುವ ಹಾಜಿ ಕಲೀಮ್ ಉಲ್ಲಾ ಖಾನ್, ಶಾ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ. ಅಮಿತ್ ಶಾ ಅವರ ಹೆಸರನ್ನು ನಾಮಕರಣ ಮಾಡಿರುವ ಮಾವಿನ ತಳಿಗಳು  ಶಾ ಮಾವು ಎಂದೇ ಖ್ಯಾತವಾಗಲಿದೆ. 
ಶಾ ಮಾವಿನ ತಳಿ ಕೋಲ್ಕತ್ತಾದ ಹುಸ್ನ್-ಎ-ಆರಾ ಹಾಗೂ ಲಖನೌ ನಲ್ಲಿ ಸಿಗುವ ಜನಪ್ರಿಯ ದಸೇರಿ ತಳಿಯ ಮಿಶ್ರ ತಳಿಯಾಗಿದ್ದು, ಈಗಷ್ಟೇ ಹಣ್ಣಾಗುತ್ತಿರುವ ಈ ತಳಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. 
ಕಲೀಮ್ ಉಲ್ಲಾ ಖಾನ್ ಮಾವಿನ ತಳಿಯೊಂದಕ್ಕೆ ರಾಜಕಾರಣಿಯ ಹೆಸರನ್ನು ನಾಮಕರಣ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ವಿಶಿಷ್ಟ ಮಾವಿನ ತಳಿಗೆ ನಾಮಕರಣ ಮಾಡಿದ್ದರು. 
ರಾಜಕಾರಣಿಗಳಷ್ಟೇ ಅಲ್ಲದೇ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಬಾಲಿವುಡ್ ತಾರೆಗಳ ಹೆಸರನ್ನೂ ಮಾವಿನ ತಳಿಗೆ ನಾಮಕರಣ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com