ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಓಲೈಕೆ ರಾಜಕಾರಣ ಬೇಡ, ಕ್ರಿಮಿನಲ್ ಗಳನ್ನು ಬಂಧಿಸಿ: ದೀದಿಗೆ ಮುಸ್ಲಿಮರ ಒತ್ತಾಯ!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಎರಡು ಅಪರಾಧ ಪ್ರಕರಣಗಳ ಸಂಬಂಧ ಸಿಎಂ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ಮುಸ್ಲಿಮರ ಗುಂಪೊಂದು, ..
Published on
ಕೊಲ್ಕೋತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಎರಡು ಅಪರಾಧ ಪ್ರಕರಣಗಳ ಸಂಬಂಧ ಸಿಎಂ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ಮುಸ್ಲಿಮರ ಗುಂಪೊಂದು, ಯಾವುದೇ ಸಮುದಾಯವನ್ನು ಓಲೈಸುವ ರಾಜಕಾರಣ ಮಾಡದೇ, ಅಪರಾಧಕ್ಕೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಎನ್ ಆರ್ ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಸಂಬಂಧ ಸಿಎಂ ಗೆ ಪತ್ರ ಬರೆಯಲಾಗಿದೆ, ಎರಡು ಪ್ರಕರಣಗಳಲ್ಲಿ  ಹಲ್ಲೆ ಮಾಡಿರುವ ಗುಂಪುಗಳಲ್ಲಿ ನಮ್ಮ ಸಮುದಾದಯವರು ಸೇರಿದ್ದಾರೆ, ಇದರಿಂದಾಗಿ ನಮಗೆ ನೋವುಂಟಾಗಿದ್ದು ಮುಜುಗರಕ್ಕೊಳಗಾಗಿದ್ದೇವೆ, ಹೀಗಾಗಿ ಅದರಲ್ಲಿ ಪಾಲ್ಗೋಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 
ಕೇವಲ ಎರಡು ಪ್ರಕರಣ ಮಾತ್ರವಲ್ಲ ಬೇರೆ ಯಾವುದೇ ಪ್ರಕರಣಗಳಲ್ಲಿ ಮುಸ್ಲಿಮರು ಭಾಗಿಯಾಗಿದ್ದರೇ ಮುಲಾಜಿಲ್ಲದೇ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ.
ಏಕೆಂದರೇ ಯಾವುದೇ ಒಂದು ಸಮುದಾಯದ ಓಲೈಕೆ ಮಾಡಲು ತಾವು ಮುಂದಾಗಬಾರದು ಎಂದು 46 ಮುಸ್ಲಿಂ ಕುಟುಂಬಗಳ ಸಹಿ ಇರುವ ಪತ್ರವನ್ನು ರವಾನಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com