ಮಗಳನ್ನು ಅಪಹಾಸ್ಯ ಮಾಡಿದವರಿಗೆ ಸಚಿವೆ ಸ್ಮೃತಿ ಇರಾನಿ ಕೊಟ್ಟ ತಿರುಗೇಟು ಹೀಗಿತ್ತು!

ಶಾಲೆಯಲ್ಲಿ ತಮ್ಮ ಮಗಳನ್ನು ಅಪಹಾಸ್ಯ ಮಾಡಿ ಟೀಕಿಸಿದ್ದವರಿಗೆ ಸಚಿವೆ ಸ್ಮೃತಿ ಇರಾನಿ ತಕ್ಕ ತಿರುಗೇಟು ನೀಡಿದ್ದಾರೆ. ..
ಪುತ್ರಿಯೊಂದಿಗೆ ಸಚಿವೆ ಸ್ಮೃತಿ ಇರಾನಿ
ಪುತ್ರಿಯೊಂದಿಗೆ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಶಾಲೆಯಲ್ಲಿ ತಮ್ಮ ಮಗಳನ್ನು ಅಪಹಾಸ್ಯ ಮಾಡಿ ಟೀಕಿಸಿದ್ದವರಿಗೆ ಸಚಿವೆ ಸ್ಮೃತಿ ಇರಾನಿ ತಕ್ಕ ತಿರುಗೇಟು ನೀಡಿದ್ದಾರೆ. 
ಇತ್ತೀಚೆಗೆ ಕೇಂದ್ರ ಸಚಿವಿ ಸ್ಮೃತಿ ಇರಾನಿ ಅವರು ಮಗಳೊಂದಿಗೆ ಇರುವ ಸೆಲ್ಫೀ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು, ಇದನ್ನು  ನೋಡಿದ  ಸ್ಮೃತಿ ಇರಾನಿ ಮಗಳ ತರಗತಿಯ ಗೆಳೆಯರು ಆಕೆಯನ್ನು ಅವಮಾನಿಸಿ ಅಪಹಾಸ್ಯ ಮಾಡಿದ್ದಕ್ಕಾಗಿ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.
ಜೋಯಿಶ್​ಇರಾನಿ ತರಗತಿಯ ಸ್ನೇಹಿತರು ನಿಮ್ಮ ತಾಯಿಯ ಅಂದದ ಮುಂದೆ ನೀನು ಏನು ಅಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ. ಇದರಿಂದ ನೊಂದಿದ್ದ ಆಕೆ ತಾಯಿಯ ಮುಂದೆ ಕಣ್ಣೀರು ಸುರಿಸಿ ಫೋಟೊ ಡಿಲೀಟ್‌ ಮಾಡುವಂತೆ ಕೇಳಿಕೊಂಡಿದ್ದಾಳೆ. 
ನನ್ನ ಮಗಳೊಂದಿಗಿನ ಸೆಲ್ಫಿಯನ್ನು ಡಿಲೀಟ್‌ ಮಾಡಿದ್ದೇನೆ. ಏಕೆಂದರೆ ಆಕೆಯ ತರಗತಿಯಲ್ಲಿರುವ ಪುಂಡ ವಿದ್ಯಾರ್ಥಿ  ಆಕೆಯ ಅಂದವನ್ನು ಅಪಹಾಸ್ಯ ಮಾಡಿದ್ದಾನೆ. ಅವಳನ್ನು ನನ್ನ ಜತೆ ಹೋಲಿಕೆ ಮಾಡಿ ತರಗತಿಯಲ್ಲಿ ಅವಮಾನ ಮಾಡಿದ್ದಾನೆ. ಇದನ್ನು ಆಕೆ ಕಣ್ಣೀರು ಸುರಿಸುತ್ತಾ ಫೋಟೊವನ್ನು ಡಿಲೀಟ್‌ ಮಾಡುವಂತೆ ನನ್ನ ಮುಂದೆ ಹೇಳಿದಾಗ ಆಕೆಯ ಕಣ್ಣೀರನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ,
ಪೋಸ್ಟ್​ಡಿಲೀಟ್​ಮಾಡಿದ್ದರಿಂದ ಆ ರೀತಿ ಟೀಕಿಸುವ ಕೆಟ್ಟವರಿಗೆ ಇನ್ನಷ್ಟು ಬೆಂಬಲ ನೀಡಿದಂತಾಗುತ್ತದೆ ಎಂಬುದು ನನಗೆ ಅರಿವಾಯಿತು. ನನ್ನ ಈ ನಡೆಯು ಅವರಿಗೆ ಕುಮಕ್ಕು ಕೊಟ್ಟಂತೆ ಆಗುತ್ತದೆ ಎಂಬುದು ನನಗೆ ತಿಳಿದಿದೆ. ಹಾಗಾಗಿ ಮಗಳ ಮತ್ತೊಂದು ಪೋಟೊವನ್ನು ಪೋಸ್ಟ್​ ಮಾಡುವ ಮೂಲಕ ಪೋಲಿ ವಿದ್ಯಾರ್ಥಿಗೆ ಮಾತಿನ ಚಾಟಿ ಬೀಸಿದ್ದಾರೆ.
ನನ್ನ ಮಗಳು ಓರ್ವ ನಿಪುಣ ಕ್ರೀಡಾಪಟುವಾಗಿದ್ದು, ಲಿಮ್ಕಾ ಬುಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಅಲ್ಲದೆ, ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದಿದ್ದು, ವಿಶ್ವ ಚಾಂಪಿಯನ್​ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದಾಳೆ. ಆಕೆ ಪ್ರೀತಿಯ ಮಗಳು ಮತ್ತು ಆಕೆ ಸುಂದರ. ನಿಮಗೆ ಬೇಕಾದಂತೆ ಅವಳನ್ನು ಪೀಡಿಸಿ. ಆದರೆ ಅವಳು ಮತ್ತೆ ಹೋರಾಡುತ್ತಾಳೆ. ಅವಳು ಜೊಯಿಶ್ ಇರಾನಿ ಮತ್ತು ನಾನು ಅವಳ ತಾಯಿ ಎನ್ನುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಜೊತೆ ಪೋಸ್ಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com