ಪ್ರಧಾನಿ ಮೋದಿಯನ್ನು ಕೊಳಚೆ ಮೋರಿಗೆ ಹೋಲಿಸಿ ಕ್ಷಮೆಯಾಚಿಸಿದ ಅಧೀರ್ ರಂಜನ್

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಂಧಿ ನಾಲೆ' ಇದ್ದಂತೆ ಎಂದು ಕೊಳಚೆ ಮೋರಿಗೆ ಹೋಲಿಸಿದ್ದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ವಿರುದ್ಧ ಬಿಜೆಪಿ ಮುಗಿಬಿದ್ದ ಬಳಿಕ ಕ್ಷಮೆಯಾಚಿಸಿದ್ದಾರೆ.
ಅಧಿರ್ ರಂಜನ್
ಅಧಿರ್ ರಂಜನ್
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಂಧಿ ನಾಲೆ' ಇದ್ದಂತೆ ಎಂದು ಕೊಳಚೆ ಮೋರಿಗೆ ಹೋಲಿಸಿದ್ದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ವಿರುದ್ಧ ಬಿಜೆಪಿ ಮುಗಿಬಿದ್ದ ಬಳಿಕ ಕ್ಷಮೆಯಾಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಮಾನ ಮಾಡಬೇಕೆಂಬ ಉದ್ದೇಶ ಹೊಂದಿರಲಿಲ್ಲ. ಒಂದು ವೇಳೆ ತಮ್ಮ ಹೇಳಿಕೆಯಿಂದ ಮೋದಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಅವರು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆ ವೇಳೆ ಮಾತನಾಡಿದ ಅಧಿರ್ ರಂಜನ್, ಮೋದಿ ಅವರನ್ನು ಸ್ವಾಮಿ ವಿವೇಕಾನಂದ ಅವರಿಗೆ ಹೋಲಿಸುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನರೇಂದ್ರ ಮೋದಿ ಅವರನ್ನು ಕೊಳಚೆ ಮೋರಿಗೆ ಹೋಲಿಸಿದ್ದರು. 
 ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ಸದಸ್ಯರು ಮಾತ್ರ ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಅಂತಾ ಹೇಳುತ್ತಿಲ್ಲ ಎಂದು ಹೇಳಿದ ಕೂಡಲೇ ಚೌದರಿ ಈ ಹೇಳಿಕೆ ನೀಡಿದ್ದರು. 
ಚೌದರಿ ಅವರ ಕೊಳಚೆ ಮೋರಿ ಹೇಳಿಕೆಯನ್ನು  ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕಡತದಿಂದ ತೆಗೆದುಹಾಕಿದರು. ಆದರೆ, ಬಿಜೆಪಿ ಕಾರ್ಯಾಧ್ಯಕ್ಷ  ಜೆ. ಪಿ. ನಡ್ಡಾ ಬಲವಾಗಿ ಖಂಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ  ಕೆಟ್ಟ ಮನೋಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. 
125 ಕೋಟಿ ಜನರು ಆರಿಸಿರುವ ಪ್ರಧಾನಿಯನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಅವಮಾನಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯೊಂದು ಚುನಾವಣೆಯಲ್ಲೂ ಜನರು ತಕ್ಕ ಪಾಠ ಕಲಿಸುತ್ತಿದ್ದಾರೆ. ಉದ್ದಟತನವೇ ಅವರನ್ನು ನಾಶಗೊಳಿಸಲಿದೆ ಎಂದು ಟ್ವೀಟ್ ನಲ್ಲಿ ಜೆ. ಪಿ. ನಡ್ಡಾ ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com