ಭದ್ರತಾ ಪಡೆಗಳು
ದೇಶ
ಜಮ್ಮು-ಕಾಶ್ಮೀರ: ಟ್ರಾಲ್ ಬಳಿ ಕಾರ್ಯಾಚರಣೆ,ಅನ್ಸಾರ್ ಗಜಾವತುಲ್ ಹಿಂದ್ ಉಗ್ರನ ಹತ್ಯೆ
ಅನ್ಸಾರ್ ಗಜಾವತುಲ್ ಹಿಂದ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಚರಣೆಯಲ್ಲಿ ಹತ್ಯೆ ಮಾಡಲಾಗಿದೆ.
ಶ್ರೀನಗರ : ಅನ್ಸಾರ್ ಗಜಾವತುಲ್ ಹಿಂದ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಚರಣೆಯಲ್ಲಿ ಹತ್ಯೆ ಮಾಡಲಾಗಿದೆ.
ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರದ ವಿಶೇಷ ಜಂಟಿ ಕಾರ್ಯಾಚರಣೆ ತಂಡ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಬ್ರನ್‌ಪಥೇರಿ, ಟ್ರಾಲ್ ಪ್ರದೇಶಗಳಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿವೆ.ಭದ್ರತಾ ಪಡೆ ನಿರ್ದಿಷ್ಟ ಪ್ರದೇಶದತ್ತ ಪ್ರವೇಶಿಸುತ್ತಿದ್ದಾಗ ಅಡಗಿದ್ದ ಉಗ್ರರು ಹಠಾತ್ ದಾಳಿ ನಡೆಸಿದ್ದು ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.
ಮೃತ ಉಗ್ರನನ್ನು ಟ್ರಾಲ್ ಪ್ರದೇಶದ ನಿವಾಸಿ ಶಬೀರ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


