ಮಹಿಳೆಯರಿಗೆ ಉಚಿತ ಮೆಟ್ರೋ ಪ್ರಯಾಣ: ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದ ಕೇಜ್ರಿವಾಲ್, ಕೇಂದ್ರ ಸಚಿವ ನಿರಾಕರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ರೈಲು ಪ್ರಯಾಣಕ್ಕೆ ಎಎಪಿ ಸರ್ಕಾರದಿಂದ ಯಾವುದೇ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಸ್ವೀಕರಿಸಿಲ್ಲ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ರೈಲು ಪ್ರಯಾಣಕ್ಕೆ  ಎಎಪಿ ಸರ್ಕಾರದಿಂದ ಯಾವುದೇ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಸ್ವೀಕರಿಸಿಲ್ಲ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು ಹೇಳಿದೆ. 
ದೆಹಲಿಯಲ್ಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವ ಸರ್ಕಾರ ಬಳಿ ಇದೆಯಾ ಎಂಬ ಟಿಎಂಪಿ ಸಂಸದ ಸುಗತ್ ರಾಯ್  ಪ್ರಶ್ನೆಗೆ ಇಲ್ಲ ಎಂದು ರಾಜ್ಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಲಿಖಿತ ಉತ್ತರ ನೀಡಿದ್ದಾರೆ.
ಈ ಸಂಬಂಧ ದೆಹಲಿ ಸರ್ಕಾರ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇಯಾ ಎಂಬ ಪ್ರಶ್ನೆಗೆ ಇಲ್ಲ ಸರ್ ಎಂದು ಪುರಿ ಉತ್ತರಿಸಿದ್ದಾರೆ.ದೆಹಲಿ ಮೆಟ್ರೋ ಹಾಗೂ ನಗರ ಸಂಚಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಎಎಪಿ ಸರ್ಕಾರ ಘೋಷಿಸಿತ್ತು. 
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ರೈಲು ನಿಗಮ ಕೇಂದ್ರಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮಹಿಳೆಯರಿಗೆ ಉಚಿತ ಮೆಟ್ರೋ ಪ್ರಯಾಣಕ್ಕೆ ಬದ್ಧವಾಗಿರವುದಾಗಿ ಹೇಳಿದ್ದಾರೆ.
ನಮ್ಮ ಕೋರಿಕೆ ಮೇರೆಗೆ ದೆಹಲಿ ಮೆಟ್ರೋ ಪ್ರಸ್ತಾವನೆಯನ್ನು ಸಲ್ಲಿಸಿದೆ. ಪ್ರಸ್ತಾವ ನಮ್ಮಗೆಲ್ಲರಿಗೂ ಒಪ್ಪಿಗೆಯಾಗಿದೆ.ಆದಾಗ್ಯೂ, ದೆಹಲಿ ಸರ್ಕಾರ ಸಮಗ್ರವಾಗಿ ಅಧ್ಯಯನ ಮಾಡುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲು ದೆಹಲಿ ಸರ್ಕಾರ ಬದ್ಧವಾಗಿರುವುದಾಗಿ ಪುನರ್ ಉಚ್ಚರಿಸುವುದಾಗಿ  ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com