ತಮ್ಮ ಮಗುವಿಗೆ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿಟ್ಟ ರಾಜಸ್ಥಾನ ದಂಪತಿ

ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ಸಂಜೆ ಭಾರತಕ್ಕೆ ಮರಳುವ...
ಅಭಿನಂದನ್ ವರ್ಧಮಾನ್
ಅಭಿನಂದನ್ ವರ್ಧಮಾನ್
Updated on
ಜೈಪುರ್: ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ಸಂಜೆ ಭಾರತಕ್ಕೆ ಮರಳುವ ಸಂದರ್ಭದಲ್ಲಿ ಜನಿಸಿದ ಮಗುವಿಗೆ ಗಂಡು ಮಗುವಿಗೆ ರಾಜಸ್ಥಾನದ ದಂಪತಿ ಅಭಿನಂದನ್ ಎಂದು ನಾಮಕರಣ ಮಾಡಿದ್ದಾರೆ.
ಅಭಿನಂದನ್ ಅವರ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಮಹಪೂರವೇ ಹರಿದು ಬರ್ತಿದೆ . ಅಲ್ಲದೇ ವಿಭಿನ್ನ ರೀತಿಯಲ್ಲಿ ಅಭಿನಂದನ್​ ಶೌರ್ಯವನ್ನು ಜನರು ಸ್ಮರಿಸುತ್ತಿದ್ದಾರೆ. ರಾಜಸ್ಥಾನದ ಜೈಪುರದ ದಂಪತಿ ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ವಿಂಗ್ ಕಮಾಂಡರ್ ಗೆ ಗೌರವ ಸಲ್ಲಿಸಿದ್ದಾರೆ.
ನನ್ನ ಸೋಸೆ ನಿನ್ನೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ಐಎಎಫ್ ಪೈಲಟ್ ಗೆ ಗೌರವ ಸಲ್ಲಿಸಿದ್ದೇವೆ. ನಮ್ಮ ಪೈಲಟ್ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮಗುವಿನ ತಾತ ಅಲ್ವಾರ್ ಜಿಲ್ಲೆಯ ಜಾನೇಶ್ ಭೂತನಿ ಅವರು ಹೇಳಿದ್ದಾರೆ.
ನನ್ನ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡುವ ಮೂಲಕ ನಾವು ಭಾರತೀಯ ಪೈಲಟ್ ನ ಶೌರ್ಯವನ್ನು ಸದಾ ನೆನಪಿಸಿಕೊಳ್ಳುತ್ತೇವೆ. ನನ್ನ ಮಗನೂ ಅಭಿನಂದನ್ ರೀತಿ ಒಬ್ಬ ವೀರ ಯೋಧನಾಗಲಿ ಎಂದು ಬಯಸುವುದಾಗಿ ಮಗುವಿನ ತಾಯಿ ಸಪ್ನಾ ದೇವಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com