ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 15 ಭಾರತದ್ದು!, ದೆಹಲಿ ವಿಶ್ವದಲ್ಲೇ ಅತ್ಯಂತ ಮಲಿನಗೊಂಡ ರಾಜಧಾನಿ!

ವಿಶ್ವದ 20 ಅತಿ ಕಲುಷಿತ, ಮಲಿನಗೊಂಡಿರುವ ನಗರಗಳ ಪಟ್ಟಿಯಲ್ಲಿ ಬರೊಬ್ಬರಿ 15 ನಗರಗಳು ಭಾರತದ್ದಾಗಿದ್ದರೆ, ಅತಿ ಹೆಚ್ಚು ಮಲಿನಗೊಂಡ ರಾಜಧಾನಿ ದೆಹಲಿಯಾಗಿದೆ.
ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 15 ಭಾರತದ್ದು!, ದೆಹಲಿ ವಿಶ್ವದಲ್ಲೇ ಅತ್ಯಂತ ಮಲಿನಗೊಂಡ ರಾಜಧಾನಿ!
ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 15 ಭಾರತದ್ದು!, ದೆಹಲಿ ವಿಶ್ವದಲ್ಲೇ ಅತ್ಯಂತ ಮಲಿನಗೊಂಡ ರಾಜಧಾನಿ!
ನವದೆಹಲಿ: ವಿಶ್ವದ 20 ಅತಿ ಕಲುಷಿತ, ಮಲಿನಗೊಂಡಿರುವ ನಗರಗಳ ಪಟ್ಟಿಯಲ್ಲಿ ಬರೊಬ್ಬರಿ 15 ನಗರಗಳು ಭಾರತದ್ದಾಗಿದ್ದರೆ, ಅತಿ ಹೆಚ್ಚು ಮಲಿನಗೊಂಡ ರಾಜಧಾನಿ ದೆಹಲಿಯಾಗಿದೆ. 
ಪರಿಸರ ಎನ್ ಜಿಒ ಗ್ರೀನ್ ಪೀಸ್ ನಡೆಸಿರುವ ಇತ್ತೀಚಿನ ಅಧ್ಯಯನದಲ್ಲಿ ವಿಶ್ವದಲ್ಲೇ ಹೆಚ್ಚು ಮಾಲಿನ್ಯ ನಗರಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದ್ದು, ಪಟ್ಟಿಯಲ್ಲಿ ಗುರುಗ್ರಾಮ್ ಹಾಗೂ ಗಾಝಿಯಾಬಾದ್ ಅಗ್ರಸ್ಥಾನಗಳನ್ನು ಗಳಿಸಿವೆ.
ಹೆಚ್ಚು ಮಲಿನಗೊಂಡ ನಗರಗಳ ಪಟ್ಟಿಯಲ್ಲಿ ದೆಹಲಿ 11 ನೇ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಮಲಿನಗೊಂಡ ರಾಜಧಾನಿಗಳ ವಿಭಾಗದಲ್ಲಿ ದೆಹಲಿ ಎಂದಿನಂತೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. 
ಜಗತ್ತಿನ ಉಳಿದ 5 ಅತ್ಯಂತ ಮಲಿನಗೊಂಡ ನಗರಗಳು ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿವೆ. ಚೀನಾ ಒಂದು ದಶಕದಿಂದ ಮಾಲಿನ್ಯ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಬೀಜಿಂಗ್ ನಗರ ಈಗ ವಿಶ್ವದ ಅತಿ ಹೆಚ್ಚು ಮಲಿನಗೊಂಡ ನಗರಗಳ ಪೈಕಿ 122 ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com