ಬಾಲಾಕೋಟ್ ಉಗ್ರ ಕ್ಯಾಂಪ್ ಧ್ವಂಸ ಮಾಡಿದ್ದ ಇಸ್ರೇಲ್ ಬಾಂಬ್ ಸುಖೋಯ್ ಗೂ ಅಳವಡಿಕೆ!

ಪುಲ್ವಾಮ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಬಳಕೆ ಮಾಡಲಾದ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಅನ್ನು ಸುಖೋಯ್ ಯುದ್ಧ ವಿಮಾನಗಳಿಗೂ ಅಳವಡಿಸುವುದಾಗಿ ಭಾರತೀಯ ವಾಯುಸೇನೆ ಹೇಳಿದೆ.
ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಮತ್ತು ಸುಖೋಯ್ ಯುದ್ಧ ವಿಮಾನ
ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಮತ್ತು ಸುಖೋಯ್ ಯುದ್ಧ ವಿಮಾನ
Updated on: 
ನವದೆಹಲಿ: ಪುಲ್ವಾಮ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಬಳಕೆ ಮಾಡಲಾದ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಅನ್ನು ಸುಖೋಯ್ ಯುದ್ಧ ವಿಮಾನಗಳಿಗೂ ಅಳವಡಿಸುವುದಾಗಿ ಭಾರತೀಯ ವಾಯುಸೇನೆ ಹೇಳಿದೆ.
ಹೌದು.. ಪಿಎಕೆಯಲ್ಲಿನ ಬಾಲಾಕೋಟ್, ಚಕೋಟಿ ಸೇರಿದಂತೆ ಜೈಶ್ ಇ ಉಗ್ರ ಸಂಘಟನೆಯ ಪ್ರಮುಖ ನಾಲ್ಕು ಉಗ್ರ ಕ್ಯಾಂಪ್ ಗಳನ್ನು ಛಿದ್ರ ಮಾಡಿದ್ದ ಸ್ಪೈಸ್ 2000 ಬಾಂಬ್ ಗಳನ್ನು ವಾಯುಸೇನೆ ಪ್ರಮುಖ ಶಕ್ತಿ ಸುಖೋಯ್ ಜೆಟ್ ಯುದ್ಧ ವಿಮಾನಗಳಿಗೂ ಅಳವಡಿಸುವುದಾಗಿ ವಾಯುಸೇನೆ ಮಂಗಳವಾರ ಹೇಳಿದೆ.
ಪ್ರಮುಖವಾಗಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪಶ್ಚಿಮ ಭಾರತದ ರಾಜ್ಯಗಳಲ್ಲಿರುವ ವಾಯುನೆಲೆಗಳಲ್ಲಿನ ಯುದ್ಧ ವಿಮಾನಗಳಿಗೆ ತುರ್ತಾಗಿ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೇವಲ ಪಿಒಕೆಯಲ್ಲಿ ವಾಯುದಾಳಿ ಮಾತ್ರವಲ್ಲದೇ ಸ್ಪೈಸ್ 2000 ಬಾಂಬ್ ಗಳು ಕಳೆದ ವರ್ಷ ನಡೆದಿದ್ದ ಗಗನ್ ಶಕ್ತಿ ವೈಮಾನಿಕ ತಾಲೀಮಿನಲ್ಲೂ ತನ್ನ ಸಾಮರ್ಥ್ಯದ ಪರಿಚಯ ಮಾಡಿಕೊಟ್ಟಿತ್ತು. ಹೀಗಾಗಿ ಇದನ್ನು ಸೇನೆಯ ಮಿರಾಜ್ 2000 ಯುದ್ಧ ವಿಮಾನಗಳಿಗೆ ಅಳವಡಿಸಲಾಗಿತ್ತು. ಇದೀಗ ಪಿಒಕೆ ಮೇಲಿನ ವಾಯುದಾಳಿ ಯಶಸ್ಸಿನ ಬೆನ್ನಲ್ಲೇ ಸುಖೋಯ್ 30ಎಸ್ ಯುದ್ಧ ವಿಮಾನಗಳಿಗೂ ಅಳವಡಿಸುವುದಾಗಿ ಸೇನೆ ಹೇಳಿದೆ.
ಇನ್ನು ಈಗಾಗಲೇ ಸೇನೆ ಸುಖೋಯ್ 30 ಎಸ್ ಯುದ್ಧ ವಿಮಾನಕ್ಕೆ ಸ್ಪೈಸ್ 2000 ಬಾಂಬ್ ಗಳನ್ನು ಅಳವಡಿಸಿ ಪರೀಕ್ಷೆ ನಡೆಸಿದ್ದು, ಎಲ್ಲ ಪರೀಕ್ಷೆಗಳಲ್ಲೂ ಸ್ಪೈಸ್ 2000 ಬಾಂಬ್ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಸೇನೆ ಇದೀಗ ಅಧಿಕೃತವಾಗಿ ಸಂಭಾವ್ಯ ಕಾರ್ಯಾಚರಣೆಗಳಲ್ಲೂ ಸುಖೋಯ್ ಯುದ್ಧ ವಿಮಾನದ ಮೂಲಕ ಈ ಬಾಂಬ್ ಗಳನ್ನು ಬಳಕೆ ಮಾಡಲು ನಿರ್ಧರಿಸಿದೆ.
ಕೆಲ ವರ್ಷಗಳ ಹಿಂದಷ್ಟೇ ಭಾರತ ಸರ್ಕಾರ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡು ಸುಮಾರು 200 ಸ್ಪೈಸ್ ಬಾಂಬ್ ಗಳನ್ನು ಖರೀದಿ ಮಾಡಿತ್ತು. ಅಂತೆಯೇ ಮುಂದಿನ ವರ್ಷಾಂತ್ಯದ ಹೊತ್ತಿಗೆ ಹೆಚ್ಚುವರಿಯಾಗಿ ಮತ್ತೆ 20 ಬಾಂಬ್ ಗಳನ್ನು ಭಾರತ ಖರೀದಿಸುವ ಸಾಧ್ಯತೆ ಇದೆ.
ಬಾಂಬ್ ನ ವಿಶೇಷ ಏನು?
ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳು ಲೇಸರ್ ನಿರ್ದೇಶಿತ (ಲೇಸರ್ ಗೈಡೆಡ್) ಬಾಂಬ್ ಗಳಾಗಿದ್ದು. ಇದರಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಈ ಬಾಂಬ್ ಗಳು ಸಾಮಾನ್ಯವಾಗಿ ಶುತ್ರಪಾಳಯದ ರಾಡಾರ್ ಗಳ ಕಣ್ಣಿಗೆ ಕಾಣುವುದಿಲ್ಲ. ಅಲ್ಲದೆ ಗುರಿಗಳನ್ನು ತೋರಿಸಿ ಬಟನ್ ಒತ್ತಿದರೆ ಯಾವುದೇ ಕಾರಣಕ್ಕೂ ಗುರಿ ತಪ್ಪುವುದಿಲ್ಲ. ಈ ಬಾಂಬ್ ಗಳು ಸೇನೆಯ ಬತ್ತಳಿಕೆ ಸೇರಿದ ಬಳಿಕ ವಾಯುಸೇನೆಯ ಸಾಮರ್ಥ್ಯ ಮತ್ತಶ್ಟು ವೃದ್ಧಿಸಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com