ಆರ್ಥಿಕ ಸಂಕಷ್ಟದಲ್ಲಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ, ಸಿಬ್ಬಂದಿಗೆ ಅರ್ಧ ವೇತನ!

ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಸರ್ಕಾರಿ ಸ್ವಾಮ್ಯದ ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(ಟಿಐಎಫ್ಆರ್) ತೀವ್ರ...
ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಮುಂಬೈ: ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಸರ್ಕಾರಿ ಸ್ವಾಮ್ಯದ ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(ಟಿಐಎಫ್ಆರ್) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಿಬ್ಬಂದಿಗೆ ಅರ್ಧ ವೇತನ ಪಾವತಿಸುತ್ತಿದೆ.
ಈ ಸಂಬಂಧ ಸಿಬ್ಬಂದಿಗೆ ಪತ್ರ ಬರೆದಿರುವ ಟಿಐಎಫ್ಆರ್ ರಿಜಿಸ್ಟ್ರಾರ್ ವಿಂಗ್ ಕಮಾಂಡರ್(ನಿವೃತ್ತ) ಜಾರ್ಜ್ ಆಂಟೋನಿ ಅವರು, ಹಣದ ಕೊರತೆ ಹಿನ್ನೆಲೆಯಲ್ಲಿ  ಫೆಬ್ರವರಿ ತಿಂಗಳಿನ ವೇತನವನ್ನು ಮೂಲ ವೇತನದ ಶೇ.50ರಷ್ಟು ಮಾತ್ರ ನೀಡಲಾಗುವುದು ಎಂದು ಹೇಳಿದ್ದಾರೆ.
'ವೇತನ ಪಾವತಿಸಲು ಸಾಕಷ್ಟು ಹಣ ನಮ್ಮ ಬಳಿ ಇಲ್ಲದಿರುವುದರಿಂದ ನಮ್ಮೆಲ್ಲಾ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನ ಮೂಲವೇತನದ ಅರ್ಧದಷ್ಟನ್ನು ಮಾತ್ರ ಪಾವತಿಸಲಾಗುವುದು ಮತ್ತು ಸೂಕ್ತ ನಿಧಿ ಸಂಗ್ರಹಗೊಂಡ ಬಳಿಕ ಉಳಿದ ಮೊತ್ತವನ್ನು ಪಾವತಿ ಮಾಡಲಾಗುವುದು' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಟಿಐಎಫ್ಆರ್. ಕೇಂದ್ರ ಸರ್ಕಾರದ ಅಣು ಶಕ್ತಿ ಸಚಿವಾಲಯದಡಿ ಬರುವ ಸಂಸ್ಥೆಯಾಗಿದ್ದು, ಡಾಕ್ಟರೇಟ್ ಪದವಿಗಳನ್ನು ಪ್ರಧಾನಿಸುವ ಸ್ವಾಯತ್ತ ವಿಶ್ವವಿದ್ಯಾನಿಲಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com