ಸಾಂದರ್ಭಿಕ ಚಿತ್ರ
ದೇಶ
ಲೋಕ್ ಪಾಲ್: 10 ದಿನದೊಳಗೆ ಆಯ್ಕೆ ಸಮಿತಿ ಸಭೆ ದಿನಾಂಕ ನಿಗದಿಪಡಿಸಿ, ಕೇಂದ್ರಕ್ಕೆ 'ಸುಪ್ರೀಂ' ತಾಕೀತು
ಲೋಕ್ ಪಾಲ್ ನೇಮಕಾತಿಗೆ ಆಯ್ಕೆ ಸಮಿತಿ ಸಭೆ ಸೇರುವುದಕ್ಕೆ ದಿನಾಂಕವನ್ನು 10 ದಿನಗಳೊಳಗೆ...
ನವದೆಹಲಿ: ಲೋಕ್ ಪಾಲ್ ನೇಮಕಾತಿಗೆ ಆಯ್ಕೆ ಸಮಿತಿ ಸಭೆ ಸೇರುವುದಕ್ಕೆ ದಿನಾಂಕವನ್ನು 10 ದಿನಗಳೊಳಗೆ ನಿಗದಿಪಡಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಸರ್ಕಾರಿ ಪರ ವಕೀಲ ಕೆಕೆ ವೇಣುಗೋಪಾಲ್ ಅವರಿಗೆ ಸೂಚಿಸಿದೆ.
ಲೋಕ್ ಪಾಲ್ ದ ಅಧ್ಯಕ್ಷರು, ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸದಸ್ಯರನ್ನು ನೇಮಕಾತಿ ಮಾಡಲು ಮೂರು ತಂಡಗಳ ಹೆಸರನ್ನು ಶೋಧನಾ ಸಮಿತಿ ಶಿಫಾರಸು ಮಾಡಿದೆ ಎಂದು ಅಟೊರ್ನಿ ಜನರಲ್ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಸದ್ಯದಲ್ಲಿಯೇ ಲೋಕ್ ಪಾಲ್ ನೇಮಕಕ್ಕೆ ಆಯ್ಕೆ ಸಮಿತಿಯ ಸಭೆ ನಡೆಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಗೆ ಸೂಚಿಸಿದೆ ಎಂದು ಹೇಳಿದ್ದಾರೆ.

