ಜಮ್ಮು ಬಸ್ ನಿಲ್ದಾಣದಲ್ಲಿ ಗ್ರನೇಡ್ ದಾಳಿ ನಡೆಸಿದ ಉಗ್ರ ಬಾಲಾಪರಾಧಿ
ನವದೆಹಲಿ: ಜಮ್ಮು ಬಸ್ ನಿಲ್ದಾಣದಲ್ಲಿ ನಿನ್ನೆ ಗ್ರನೇಡ್ ದಾಳಿ ನಡೆಸಿದ ಉಗ್ರ 16 ವರ್ಷದ ಬಾಲಾಪರಾಧಿಯಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ 50 ಸಾವಿರ ರೂ. ಪಡೆದಿದ್ದಾಗಿ ವಿಚಾರಣೆ ವೇಳೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಬಸ್ ನಿಲ್ದಾಣದ ಬಳಿ ನಿನ್ನೆ ನಡೆದ ಗ್ರನೇಡ್ ಸ್ಪೋಟದ ವೇಳೆಯಲ್ಲಿ ಇಬ್ಬರು ಮೃತಪಟ್ಟು, 31 ಮಂದಿ ಗಾಯಗೊಂಡಿದ್ದರು. ಈ ದಾಳಿ ನಡೆಸಿದ ಉಗ್ರ ಮಾರ್ಚ್ 12ಕ್ಕೆ 16 ವರ್ಷ ಪೂರ್ಣಗೊಳಿಸಲಿದ್ದು, ಜಮ್ಮು- ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗಾಗಿ ಬಾಲಕರನ್ನು ಬಳಸಿಕೊಳ್ಳುತ್ತಿರುವುದು ತಿಳಿದುಬಂದಿದೆ.
ಬಂಧಿಸಲಾಗಿರುವ ಉಗ್ರನ ಶಾಲಾ ದಾಖಲೆಗಳು, ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರ ಎಲ್ಲಾ ದಾಖಲೆಗಳಲ್ಲಿ ಆತನ ಜನ್ಮ ದಿನ ಮಾರ್ಚ್ 12, 2003 ಆಗಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮುನ್ನ ವಿಚಾರಣಾಧಿಕಾರಿಗಳು ಆತನ ಜನ್ಮ ದಿನವನ್ನು ಪರಿಶೀಲನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನ ಜನದಟ್ಟಣೆಯ ಪ್ರದೇಶದಲ್ಲಿ ದಾಳಿ ನಡೆಸುವಂತೆ ಕುಲ್ಗಾಮ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಪಾಯಾಜ್ ನಿಂದ ಗ್ರನೇಡ್ ಪಡೆದುಕೊಂಡಿದ್ದಾಗಿ ಆತ ವಿಚಾರಣೆ ವೇಳೆಯಲ್ಲಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.
ಪುಲ್ವಾಮಾ ದಾಳಿ ನಡೆದ ಮೂರು ವಾರಗಳ ನಂತರ ಘಟನೆ ಜಮ್ಮು ಬಸ್ ನಿಲ್ದಾಣದಲ್ಲಿ ನಡೆದ ಗ್ರನೇಡ್ ದಾಳಿ ಕಳೆದ ವರ್ಷ ಮೇ ನಿಂದಾಚೆಗೆ ನಡೆದ ಮೂರನೇ ದಾಳಿ ಇದಾಗಿದ್ದು, ಬಂಧಿನ ಉಗ್ರನ ವಿಚಾರಣೆ ಮುಂದುವರೆದಿದೆ. ಕಾನೂನು ಪ್ರಕಾರ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುತ್ತದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ