ಲೋಕಸಭಾ ಚುನಾವಣೆ: ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ಮೀಸಲು: ಬಿಜೆಡಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ನೀಡುವುದಾಗಿ ಒಡಿಶಾ ಬಿಜೆಡಿ ಪಕ್ಷ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ನೀಡುವುದಾಗಿ ಒಡಿಶಾ ಬಿಜೆಡಿ ಪಕ್ಷ ಘೋಷಣೆ ಮಾಡಿದೆ.
ಮಿಷನ್ ಶಕ್ತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಯಂ ಸೇವಾ ಸಂಘ ಉದ್ದೇಶಿಸಿ ಮಾತನಾಡಿದ ನವೀನ್ ಪಟ್ನಾಯಕ್, ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ. 
'ಪ್ರಸಿದ್ಧ ಬಿಜು ಬಾಬು ಅವರ ಕರ್ಮಭೂಮಿಯಾದ ಕೇಂದ್ರಪರಾದಲ್ಲಿ ಮಹಿಳಾ ಮೀಸಲಾತಿ ವಿಚಾರ ಘೋಷಿಸಲು ಸಂತಸವಾಗುತ್ತಿದೆ. ದೇಶದ ಮಹಿಳಾ ಸಬಲೀಕರಣದ ಹಾದಿಯಲ್ಲಿ ಒಡಿಶಾದ ಮಹಿಳೆಯರು ಮುಂದಿದ್ದಾರೆ. ಭಾರತ ಪ್ರಪಂಚದಲ್ಲಿ ಮುನ್ನಡೆ ಸಾಧಿಸಬೇಕೆಂದಿದ್ದರೆ, ಅಮೆರಿಕ ಹಾಗೂ ಚೀನಾಗಳಿಗೆ ಸಮನಾಗಿ ಮುಂದುವರಿಯಬೇಕೆಂದಿದ್ದರೆ ಮಹಿಳಾ ಸಬಲೀಕರಣ ಅಗತ್ಯ ಎಂದು ನವೀನ್ ಪಟ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ. 
ಕೊಟ್ಟ ಭರವಸೆ ಉಳಿಸಿಕೊಳ್ಳುವುದಾದಲ್ಲಿ, ಚುನಾವಣೆ ಸಂದರ್ಭಗಳಲ್ಲಿ ಪ್ರಚಾರ ಮಾಡುವ ಮಹಿಳಾ ಸಬಲೀಕರಣ ಅಂಶವನ್ನು ಜಾರಿಗೆ ತರಲು ಶ್ರಮಿಸಿ ಎಂದೂ ಪಟ್ನಾಯಕ್ ಅವರು ರಾಷ್ಟ್ರೀಯ ಪಕ್ಷಗಳಿಗೆ ಕರೆ ಕೊಟ್ಟಿದ್ದಾರೆ.  ಜೊತೆಗೆ ಕೇಂದ್ರಪರಾದಲ್ಲಿರುವ ಮಿಷನ್ ಶಕ್ತಿ ಭವನಕ್ಕೆ ₹1ಕೋಟಿ ಅನುದಾನ ಘೋಷಿಸಿದ್ದಾರೆ.  
ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿ ನೀಡುವ ಪ್ರಸ್ತಾವಕ್ಕೆ 2018ರ ನವೆಂಬರ್‌ನಲ್ಲಿಯೇ ಪಟ್ನಾಯಕ್ ಸರ್ಕಾರ ಅನುಮೋದನೆ ಪಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com