ರಾಹುಲ್ ಗಾಂಧಿ ಸರ್ವಾಧಿಕಾರಿಯಂತೆ ವರ್ತಿಸಲ್ಲ: ಕಾಂಗ್ರೆಸ್ ಸೇರಿದ ಬಳಿಕ ಹಾರ್ದಿಕ್‌ ಪಟೇಲ್‌

ಪಾಟಿದಾರ್ ಸಮುದಾಯದ​ ಮೀಸಲಾತಿ ಹೋರಾಟಗಾರ ಹಾರ್ದಿಕ್​ ಪಟೇಲ್​ ಅವರು ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಯುಪಿಎ....
ಹಾರ್ದಿಕ್ ಪಟೇಲ್ - ರಾಹುಲ್ ಗಾಂಧಿ
ಹಾರ್ದಿಕ್ ಪಟೇಲ್ - ರಾಹುಲ್ ಗಾಂಧಿ
Updated on: 
ಅಹಮದಾಬಾದ್​: ಪಾಟಿದಾರ್ ಸಮುದಾಯದ​ ಮೀಸಲಾತಿ ಹೋರಾಟಗಾರ  ಹಾರ್ದಿಕ್​ ಪಟೇಲ್​ ಅವರು ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾದರು.
ಇಂದು ಅಹಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಾರ್ದಿಕ್ ಪಟೇಲ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಹಾರ್ದಿಕ್ ಪಟೇಲ್, ಜನರು ನಾನು ಕಾಂಗ್ರೆಸ್​ ಮತ್ತು ರಾಹುಲ್​ ಗಾಂಧಿಯನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದು ಪ್ರಶ್ನಿಸಿದರು. ರಾಹುಲ್​ ಗಾಂಧಿ ಪ್ರಾಮಾಣಿಕ ವ್ಯಕ್ತಿ. ಹಾಗಾಗಿ ಅವರನ್ನು ನಾನು ಆಯ್ಕೆ ಮಾಡಿದೆ. ಅವರು ಸರ್ವಾಧಿಕಾರಿಯಂತೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.
ಪುಲ್ವಾಮ ಉಗ್ರ ದಾಳಿಯ ಬಳಿಕ ಕಾಂಗ್ರೆಸ್​ ಫೆಬ್ರವರಿ 28ರಂದು ಆಯೋಜಿಸಲು ಉದ್ದೇಶಿಸಿದ್ದ ಪ್ರಚಾರ ಸಭೆಯನ್ನು ಮುಂದೂಡುವ ಮೂಲಕ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡುತ್ತಾ ಸುತ್ತುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com