ಏರ್ ಸ್ಟ್ರೈಕ್ ಬಳಿಕ ಮತ್ತೆ ಗಡಿಯಲ್ಲಿ ಭಾರತೀಯ ವಾಯುಸೇನೆಯ ಸಮರಾಭ್ಯಾಸ!

ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಗಡಿ ಉಲ್ಲಂಘನೆ ಮಾಡಿದ ಪ್ರಯತ್ನದ ಬೆನ್ನಲ್ಲೇ ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿರುವ ಭಾರತೀಯ ವಾಯುಸೇನೆ ಗಡಿಯಲ್ಲಿ ಮಹತ್ವದ ಸಮರಾಭ್ಯಾಸ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಗಡಿ ಉಲ್ಲಂಘನೆ ಮಾಡಿದ ಪ್ರಯತ್ನದ ಬೆನ್ನಲ್ಲೇ ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿರುವ ಭಾರತೀಯ ವಾಯುಸೇನೆ ಗಡಿಯಲ್ಲಿ ಮಹತ್ವದ ಸಮರಾಭ್ಯಾಸ ನಡೆಸಿದೆ.
ಮೂಲಗಳ ಪ್ರಕಾರ ಈ ಹಿಂದೆ ಪುಲ್ವಾಮ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲಿನ ಏರ್ ಸ್ಟ್ರೈಕ್ ನಲ್ಲಿ ಪಾಲ್ಗೊಂಡಿದ್ದ ಮಿರಾಜ್ 2000 ಯುದ್ಧ ವಿಮಾನಗಳೂ ಸೇರಿದಂತೆ ವಾಯುಸೇನೆಯ ಹಲವು ಜೆಟ್ ಯುದ್ಧ ವಿಮಾನಗಳು ಸಮರಾಭ್ಯಾಸ ನಡೆಸಿವೆ. ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಪಂಜಾಬ್ ಮತ್ತು ಜಮ್ಮು ಗಡಿಗಳಲ್ಲಿ ಸೇನೆ ವಾಯು ಸಮರಾಭ್ಯಾಸ ನಡೆಸಿದ್ದು, ಸಮರಾಭ್ಯಾಸದ ವೇಳೆ ಸೇನೆ ಕಾಂಬಾಟ್ ಡ್ರಿಲ್ ನಡೆಸಿವೆ ಎಂದು ತಿಳಿದುಬಂದಿದೆ. 
ನಿನ್ನೆ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುಗಡಿ ಸಮೀಪ ಧಾವಿಸಿದ್ದವು. ಪೂಂಛ್ ಸೆಕ್ಟರ್ ನ ಸುಮಾರು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದವು. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ವಾಯುಸೇನೆ ಸಮರಾಭ್ಯಾಸದ ಮೂಲಕ ಖಡಕ್ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com