ಲಾಲು ಪ್ರಸಾದ್ ಯಾದವ್, ರಾಹುಲ್ ಗಾಂಧಿ
ಲಾಲು ಪ್ರಸಾದ್ ಯಾದವ್, ರಾಹುಲ್ ಗಾಂಧಿ

ಬಿಹಾರ: 8ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲು ಆರ್ ಜೆಡಿ ಒಪ್ಪುತ್ತಿಲ್ಲ

ಬಿಹಾರದಲ್ಲಿ 8ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ರಾಷ್ಟ್ರೀಯ ಜನತಾ ದಳ ಪಕ್ಷ ಒಪ್ಪುತ್ತಿಲ್ಲ. ಬಿಹಾರದಲ್ಲಿ ಸೀಟು ಹೊಂದಾಣಿಕೆ ಸಂಬಂಧ ಉಭಯ ಪಕ್ಷಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ.

ಪಾಟ್ನಾ: ಬಿಹಾರದಲ್ಲಿ  8ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷಕ್ಕೆ  ಬಿಟ್ಟುಕೊಡಲು ರಾಷ್ಟ್ರೀಯ ಜನತಾ ದಳ ಪಕ್ಷ ಒಪ್ಪುತ್ತಿಲ್ಲ. ಬಿಹಾರದಲ್ಲಿ ಸೀಟು ಹೊಂದಾಣಿಕೆ ಸಂಬಂಧ ಉಭಯ ಪಕ್ಷಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ.

ಮೂಲಗಳ ಪ್ರಕಾರ ಒಂದು ವೇಳೆ ಆರ್ ಜೆಡಿ 11 ಸ್ಥಾನಗಳನ್ನು ಬಿಟ್ಟುಕೊಟ್ಟರೆ ಮಾಹಘಟಬಂದನ್ ಇತರ ಪಕ್ಷಗಳಿಗೂ ಇದೇ ಪ್ರಮಾಣದಲ್ಲಿ ಸೀಟು ಹಂಚಿಕೆ ಮಾಡಬೇಕಾಗುತ್ತದೆ.ಅಂತಹ ಸಂದರ್ಭದಲ್ಲಿ ಆರ್ ಜೆಡಿ 16 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಷ್ಟಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

40 ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.11ಕ್ಕಿಂತಲೂ ಹೆಚ್ಚಿನ ಹೆಸರುಗಳನ್ನು ಕಳುಹಿಸಿಲ್ಲ,ಅಭ್ಯರ್ಥಿಗಳ ಹೆಸರನ್ನು ರಾಹುಲ್ ಗಾಂಧಿ ನಿರ್ಧರಿಸಲಿದ್ದಾರೆ. ಶೀಘ್ರವೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಖಿಲೇಶ್ ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್, ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಹಿಂದೂಸ್ತಾನ ಅವಾಮಿ ಮೋರ್ಚ್, ಎಲ್ ಜೆಡಿ ಹಾಗೂ ವಿಐಪಿ ಪಕ್ಷಗಳು ಸಹ ಬಿಹಾರದಲ್ಲಿ ಮಹಾಘಟಬಂದನ್ ರಚಿಸಿಕೊಂಡಿವೆ. ಹಿಂದೂ ಸ್ತಾಮಿ ಅವಾಮಿ ಮೋರ್ಚಾ ಸುಪ್ರೀಂ ಜಿತನ್ ರಾಮ್  ಮಂಝಿ 5 ಸ್ಥಾನಗಳನ್ನು ಕೇಳಿಕೊಂಡಿದ್ದಾರೆ.

ಬಿಹಾರದಲ್ಲಿ ಏಪ್ರಿಲ್ 11,18, 23, 29 ಹಾಗೂ ಮೇ 6, 12, 19 ರಂದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Related Stories

No stories found.

Advertisement

X
Kannada Prabha
www.kannadaprabha.com