ಮಿರಾಮಾರ್ ನಲ್ಲಿ ಮನೋಹರ್ ಪರಿಕ್ಕರ್ ಅಂತ್ಯಕ್ರಿಯೆ: ನೆಚ್ಚಿನ ಮುಖ್ಯಮಂತ್ರಿಗೆ ಜನತೆಯ ಭಾವಪೂರ್ಣ ನಮನ

ಮಾ.17 ರಂದು ನಿಧನರಾಗಿದ್ದ ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೋವಾದ ಮಿರಾಮರ್ ಬೀಚ್‍ನಲ್ಲಿ ಮಾ.18 ರಂದು
ಮಿರಾಮಾರ್ ನಲ್ಲಿ ಮನೋಹರ್ ಪರಿಕ್ಕರ್ ಅಂತ್ಯಕ್ರಿಯೆ: ನೆಚ್ಚಿನ ಮುಖ್ಯಮಂತ್ರಿಗೆ ಗೋವ ಜನತೆಯ ಭಾವಪೂರ್ಣ ನಮನ
ಮಿರಾಮಾರ್ ನಲ್ಲಿ ಮನೋಹರ್ ಪರಿಕ್ಕರ್ ಅಂತ್ಯಕ್ರಿಯೆ: ನೆಚ್ಚಿನ ಮುಖ್ಯಮಂತ್ರಿಗೆ ಗೋವ ಜನತೆಯ ಭಾವಪೂರ್ಣ ನಮನ
Updated on: 
ಪಣಜಿ: ಮಾ.17 ರಂದು ನಿಧನರಾಗಿದ್ದ ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೋವಾದ ಮಿರಾಮರ್ ಬೀಚ್‍ನಲ್ಲಿ ಮಾ.18 ರಂದು ನೆರವೇರಿತು.
ಮಿರಾಮಾರ್ ಬೀಚ್ ನಲ್ಲಿ ಸಾಗರೋಪಾದಿಯಲ್ಲಿ ನೆರೆದಿದ್ದ ಜನತೆ ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ಅಂತಿಮ ವಿದಾಯ ಹೇಳಿದರು. ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದ ನಂತರ ಸಂಜೆ 6 ಗಂಟೆ ವೇಳೆಗೆ ಹಿಂದೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪರಿಕ್ಕರ್ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. 
ಇದಕ್ಕೂ ಮುನ್ನ ನೆಚ್ಚಿನ ನಾಯಕನ ಪಾರ್ಥಿವ ಶರೀರದ ಮೆರವಣಿಗೆ ಜೊತೆಯಲ್ಲೇ ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಜನಸಾಗರ ಮಿರಾಮರ್ ಬೀಚ್ ಗೆ ಆಗಮಿಸಿತ್ತು. ಮನೋಹರ್ ಪರಿಕ್ಕರ್ ಅವರ ಅಂತ್ಯಕ್ರಿಯೆಯನ್ನು ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್ ಬಂಡೋಡ್ಕರ್ ಅವರ ಸ್ಮಾರಕದ ಪಕ್ಕದಲ್ಲೇ ನೆರವೇರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com