ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕಿದಾರ್ ಅಲ್ಲ: ಮೋದಿಯನ್ನು ಟೀಕಿಸಿದ ಯುವಕನ ವಿಡಿಯೋ ವೈರಲ್!

ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ ಅವರು ಮೈ ಬೀ ಚೌಕಿದಾರ್ ಅಭಿಯಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ ಅವರು ಮೈ ಬೀ ಚೌಕಿದಾರ್ ಅಭಿಯಾನ ಪ್ರಾರಂಭಿಸಿದ್ದು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಮಧ್ಯೆ ಯುವಕನೋರ್ವ ಕಾರ್ಯಕ್ರಮವೊಂದರಲ್ಲಿ ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕಿದಾರ್ ಅಲ್ಲ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಆಜ್ ತಕ್ ಸುದ್ದಿ ವಾಹಿನಿಯಲ್ಲಿ ಟಕ್ಕರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಯುವಕನೊಬ್ಬ ಮೋದಿಯವರ ಚೌಕಿದಾರ್ ಅಭಿಯಾನವನ್ನು ವಿಮರ್ಶಿಸಿದ್ದಾನೆ. ವೇದಿಕೆಯಲ್ಲಿ ಬಿಜೆಪಿ ವಕ್ತಾರರನ್ನು ಪ್ರಶ್ನಿಸಿದ ಯುವಕ ನೀವು ಅಂದೊಮ್ಮೆ ಪಕೋಡಾ ಮಾರಲು ಹೇಳಿದ್ದೀರಿ, ಈಗ ನೀವು ಚೌಕಿದಾರ್ ಬಗ್ಗೆ ಹೇಳುತ್ತಿದ್ದೀರಿ. ನಮಗೆ ಚೌಕಿದಾರ್ ಬೇಕಾದರೆ ಕಡಿಮೆ ಬೆಲೆಗೆ ನೇಪಾಳದಿಂದ ಸಿಗುತ್ತಾರೆ. ದೇಶಕ್ಕೆ ಬೇಕಾಗಿರುವುದು ಪ್ರಧಾನಿ. ಚೌಕಿದಾರ್ ಅಲ್ಲ ಎಂದು ಕೇಳಿದ್ದಾನೆ. 
ಇದೇ ವೇಳೆ ಮೋದಿ ಅವರ ಹಳೇ ಟ್ವೀಟನ್ನು ಉಲ್ಲೇಖಿಸಿ ಮಾತನಾಡಿದ ಆ ಯುವಕ ಕಳೆದ 70 ವರ್ಷಗಳಲ್ಲಿ ಭಾರತ ಏನೂ ಸಾಧನೆ ಮಾಡಿಲ್ಲ ಎಂದು ಹೇಳುತ್ತಿದ್ದೀರಿ. 2014ಕ್ಕಿಂತ ಮುಂಚೆ ಈ ದೇಶ ಹಾವಾಡಿಗರ ದೇಶವಾಗಿತ್ತು ಎಂದು ಪ್ರಧಾನಿ ಹೇಳಿದ್ದರು. ಆದರೆ ಪ್ರಧಾನಿ ಹುಟ್ಟುವ ಮುಂಚೆಯೇ ಇಲ್ಲಿ ಹೋಮಿ ಬಾಬಾ ಸೆಂಟರ್ ಫಾರ್ ಸಯನ್ಸ್ ಎಜುಕೇಶನ್ ಇದೆ. ಮೋದಿಯವರು ಗಿಲ್ಲಿ ದಂಡಾ ಆಡುವ ಹುಡುಗನಾಗಿದ್ದಾಗ ಭಾರತದಲ್ಲಿ ಬಕ್ರಾ ನಾಂಗಲ್ ಅಣೆಕಟ್ಟು ನಿರ್ಮಾಣವಾಗಿತ್ತು ಎಂದು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com