ಅಝರ್‌ಗೆ ಜಾಗತಿಕ ಉಗ್ರಪಟ್ಟ: ಪಟ್ಟಿಯಲ್ಲಿ ಪುಲ್ವಾಮಾ ಉಲ್ಲೇಖ ಏಕಿಲ್ಲ? ಇಲ್ಲಿದೆ ಉತ್ತರ

ವಿಶ್ವಸಂಸ್ಥೆ ಜಾಗತಿಕ ಉಗ್ರರ ಪಟ್ಟಿಗೆ ಪಾಕಿಸ್ತಾನ ಜೈಷ್-ಇ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಝರ್‌ನನ್ನು ಸೇರ್ಪಡೆ ಮಾಡಿದಾಗಿನಿಂದಲೂ 'ಜಾಗತಿಕ ಭಯೋತ್ಪಾದಕ' ಮಸೂದ್....
ಮಸೂದ್ ಅಝರ್‌
ಮಸೂದ್ ಅಝರ್‌
ನವದೆಹಲಿ: ವಿಶ್ವಸಂಸ್ಥೆ ಜಾಗತಿಕ ಉಗ್ರರ ಪಟ್ಟಿಗೆ ಪಾಕಿಸ್ತಾನ ಜೈಷ್-ಇ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಝರ್‌ ನನ್ನು ಸೇರ್ಪಡೆ ಮಾಡಿದಾಗಿನಿಂದಲೂ  'ಜಾಗತಿಕ ಭಯೋತ್ಪಾದಕ' ಮಸೂದ್ ಅಝರ್‌  ಎಂದು ಘೋಷಿಸಿದ್ದ ಯುಎನ್ಎಸ್ಸಿ ಪಟ್ಟಿಯಲ್ಲಿ ಪುಲ್ವಾಮಾ ದಾಳಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲವೇಕೆ ಎಂದು ಮಾದ್ಯಮಗಳಲ್ಲಿ ಪ್ರಶ್ನೆಗಳೆದ್ದಿತ್ತು. ಅಂತಿಮವಾಗಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಯುಎನ್ಎಸ್ಸಿಒಂದು ನಿರ್ದಿಷ್ಟ ಘಟನೆಯ ಆಧಾರದ ಅಝರ್‌ ನನ್ನು ಜಾಗತಿಕ ಉಗ್ರ ಎಂದು ಕರೆದದ್ದಲ್ಲ. ಅಝರ್‌ ನ ಹಲವಾರು ಚಟುವಟಿಕೆಗಳು ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿದೆ  ಎನ್ನುವುದನ್ನು ನಾವು ಸಮಿತಿಯ ಸದಸ್ಯರೊಂದಿಗೆ ಸಾಕ್ಷಗಳ ಮೂಲಕ ಹಂಚಿಕೊಂಡಿದ್ದೇವೆ. ಇದರ ಆಧಾರದ ಮೇಲೆ ಆತನನ್ನು ಉಗ್ರ ಪಟ್ಟಿಗೆ ಸೇರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಗುರುವಾರ ಹೇಳಿದರು. .
"ಪುಲ್ವಾಮಾ ಭಯೋತ್ಪಾದನಾ ದಾಳಿಯು ಖಂಡಿತವಾಗಿಯೂ ಜಾಗತಿಕ ಭಯೋತ್ಪಾದಕನಾಗಿದ್ದ ಮಸೂದ್ ಅಝರ್‌ ನಡೆಸಿದ್ದ ಹಲವು ಉಗ್ರ ಕೃತ್ಯಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ದೊಡ್ಡ ರಾಜತಾಂತ್ರಿಕ ವಿಜಯವಾಗಿ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆ ಬುಧವಾರ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಇದಕ್ಕೆ ಮುನ್ನ ಚೀನಾ ಅಝರ್‌ ನನ್ನು ಉಗ್ರ ಪಟ್ಟಿಗೆ ಸೇರಿಸಲು ನಾಲ್ಕು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಅಂತಿಮವಾಗಿ ಪರಿಷ್ಕರಿಸಿದ ವಿಷಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನಂತರ  ಈಗ ಸಮ್ಮತಿಯನ್ನು ಸೂಚಿಸಿದೆ.
ಉಗ್ರ ಅಝರ್‌ ಹೆಸರು ಜಾಗತಿಕ ಉಗ್ರಪಟ್ಟಿಗೆ ಸೇರುವುದರೊಡನೆ ಭಯೋತ್ಪಾದನಾ ಮಾಸ್ಟರ್ ಮೈಡ್ ಪ್ರವಾಸಕ್ಕೆ ನಿಷೇಧ, ಶಸ್ತ್ರಾಸ್ತ್ರ ನಿರ್ಬಂಧವ ಸೇರಿ ಹಲವು ನಿರ್ಬಂಧಗಳನ್ನು ಎದುರಿಸಬೇಕಾಗುವುದು. ಅಲ್ಲದೆ ತನಿಖಾ ಸಂಸ್ಥೆಯ ಅಧಿಕಾರಿಗಳು ಆತನ ಹೆಸರಲ್ಲಿನ ಆಸ್ತಿಗಳನ್ನು ಸಹ ವಶಕ್ಕೆ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com